ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಹೇಳಿಕೆ: ಮಲಯಾಳಂ ಕಿರುತೆರೆ ನಟನ ವಿರುದ್ಧ ಪ್ರಕರಣ ದಾಖಲು | Akhil Marar

Akhil Marar
Published on

Akhil Marar: ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಮಲಯಾಳಂ ಕಿರುತೆರೆ ನಟ ಅಖಿಲ್ ಮರಾರ್ ವಿರುದ್ಧ ಕೇರಳ ಪೊಲೀಸರು ಬುಧವಾರ (ಮೇ. 14) ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಜೊತೆಗೆ ಇದು ಜಾಮೀನು ರಹಿತವಾಗಿದೆ ಎಂದು ಕೊಟ್ಟಾರಕ್ಕರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲ್ಲಂನ ಕೊಟ್ಟಾರಕ್ಕರದಲ್ಲಿರುವ ಸ್ಥಳೀಯ ಬಿಜೆಪಿ ನಾಯಕ ಅನೀಶ್ ಕಿಳಕ್ಕೆಕ್ಕರ ಅವರು ದೂರು ದಾಖಲಿಸಿದ್ದಾರೆ. ಆನ್‌ಲೈನ್‌ನಲ್ಲಿ ಪ್ರಸಾರವಾದ ಶ್ರೀ ಮಾರಾರ್ ಅವರ ವಿಡಿಯೋದಲ್ಲಿ ರಾಷ್ಟ್ರದ ವಿರುದ್ಧದ ಹೇಳಿಕೆಗಳಿವೆ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆಯೇ ವಿಡಿಯೋ ಡಿಲೀಟ್​​ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಮೊದಲು ಅದನ್ನು ಮರುಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net