ಧರ್ಮದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಸಲ್ಲ

20kls1
ಕಳಸ ಮರಸಣಿಗೆ ಶ್ರೀ ಮಹಾಗಣಪತಿ ಪೂಜಾ ಮಹೋತ್ಸವದ ರಜತ ಮಹೋತ್ಸವದ ಸಮಾರಂಭದ ಬುಧವಾರ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಮುಖಂಡರನ್ನು ಗೌರವಿಸಲಾಯಿತು.
Published on

ಕಳಸ: ನಾವು ನಮ್ಮನ್ನು ಅರ್ಥ ಮಾಡಿಕೊಂಡಾಗ ನಮ್ಮ ಮಧ್ಯೆ ಇರುವ ಗೋಡೆ ತೆರೆದಾಗ ಈ ದೇಶ ವಿಶ್ವ ಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದು ಡಾ.ಎಂ.ಎಸ್.ಎಂ.ಝೈನೀ ಕಾಮಿಲ್ ಶಿವಮೊಗ್ಗ ಹೇಳಿದರು.
ಮರಸಣಿಗೆ ಶ್ರೀಮಹಾಗಣಪತಿ ಪೂಜಾ ಮಹೋತ್ಸವದ ರಜತ ಮಹೋತ್ಸವದ ಸಮಾರಂಭದಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಇಸ್ಲಾಂ ಎನ್ನುವ ಹೆಸರಿಗೆ ಅರೇಬಿಕ್‌ನಲ್ಲಿ ಶಾಂತಿ ಎಂದು ಹೆಸರಿದೆ. ಮುಸ್ಲಿಮರು ಪರಸ್ಪರ ಶಾಂತಿ ಹರಡುವವರು ಎಂದು ಪ್ರವಾದಿ ಮಹಮ್ಮದ್ ಫೈಗಂಬರ್ ಹೇಳಿದ್ದಾರೆ. ಆದರೆ ಕೆಲವು ಧರ್ಮ ತಿಳುವಳಿಕೆ ಇಲ್ಲದವರು ಧರ್ಮದ ಹೆಸರಿನಲ್ಲಿ ಭಯೋತ್ಪಾಧನೆ, ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತ್ಯವಶ್ಯಕ ಎಂದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಬ್ರಿಟೀಷರ ಆಳ್ವಿಕೆಯಿಂದ ನಾವು ಸ್ವಾತಂತ್ರೃ ಪಡೆಯಬೇಕು ಎನ್ನುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಸಾರ್ವಜನಿಕ ಮಹಾಗಣಪತಿ ಉತ್ಸವ ಆರಂಭಿಸಿದರು. ಗಣಪತಿ ಉತ್ಸವ ಹಿಂದುಗಳಿಗೆ ಮಾತ್ರ ಅಲ್ಲ ಇದು ಪ್ರತಿಯೊಬ್ಬ ಭಾರತೀಯ ಕೂಡ ಆಚರಿಸುವ ಉತ್ಸವ. ಎಲ್ಲ ಧರ್ಮಗಳು ವಿಶ್ವ ಶಾಂತಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ನಮ್ಮ ಧರ್ಮವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಇನ್ನೊಂದು ಧರ್ಮವನ್ನು ಗೌರವಿಸಬೇಕು ಎಂದು ಹೇಳಿದರು.
ಹಿರೇಬೈಲು ಸಂತ ಜೋಸೆರ ದೇವಾಲಯದ ಧರ್ಮಗುರು ಡೇವಿಡ್ ಪ್ರಕಾಶ್ ಮಾತನಾಡಿ, ಧರ್ಮದ ಆಚಾರ, ವಿಚಾರ ಸಾಂಪ್ರದಾಯವನ್ನು ಪ್ರಾಮಾಣಿಕವಾಗಿ ಮಾಡುವವರಲ್ಲಿ ಮಾತ್ರ ನಾವು ಧರ್ಮ ಕಾಣಲು ಸಾಧ್ಯ. ಎಲ್ಲ ಧರ್ಮಗಳ ಸಾರ ಮನುಷತ್ವ. ನಾನು ಯಾವ ಧರ್ಮ ಅನ್ನುವುದಕ್ಕಿಂತ ನಾನೊಬ್ಬ ಮನುಷ್ಯ ಅನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಭಾ ಕಾರ್ಯಕ್ರಮದ ನಂತ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಗಳು ನಡೆದು ಸಂಜೆ ಶ್ರೀಸ್ವಾಮಿ ಮೆರವಣೆಗೆ ನಡೆಸಿ ನಂತರ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net