ಈ ಪ್ರಶ್ನೆಗೆ ಉತ್ತರಿಸಲು ಬೇಕಿಲ್ಲ 100ಕ್ಕೆ 100 ಅಂಕ! ಕೊಡಿ ನಿಮ್ಮ ಮಿದುಳಿಗೆ ಸ್ವಲ್ಪ ಕೆಲಸ | Brain Teaser

ಬ್ರೇನ್​ ಟೀಸರ್​​ನ ಪ್ರಶ್ನೆ
ಬ್ರೇನ್​ ಟೀಸರ್​​ನ ಪ್ರಶ್ನೆ
Published on
Brain Teaser: ಗಣಿತ ಅಂದ್ರೆ ಯಾರಿಗೆ ಇಷ್ಟ ಹೇಳಿ ಅನ್ನೋದಕ್ಕಿಂತ ಯಾರಿಗೆಲ್ಲಾ ಇಷ್ಟವಿಲ್ಲ ಎಂದು ಕೇಳುವುದೇ ಸರಿ ಎನ್ನಬಹುದು. 100ರಲ್ಲಿ 80ರಷ್ಟು ಜನ ಗಣಿತ ಎಂದರೆ ದೂರ ಓಡುವವರೇ. ಕಾರಣ, ಗಣಿತ ಒಂದು ರೀತಿ ಅರ್ಥವಾಗದ, ಬಿಡಿಸಲಾಗದ ಒಗಟು. ಕೇವಲ ಕೂಡುವುದು, ಕಳಿಯುವುದನ್ನೇ ಅತ್ಯಂತ ಕಷ್ಟಕರ ಎನ್ನುವ ನಮ್ಮ ಜನರಿಗೆ ಗುಣಕಾರ, ಭಾಗಕಾರ ಹೇಳಿದರೆ ಅತ್ತ-ಇತ್ತ ಕಣ್ಣಾಯಿಸುತ್ತಾರೆ. ಅದರಲ್ಲೂ ಕೈಯಲ್ಲಿ ಮೊಬೈಲ್​, ಕ್ಯಾಲ್ಕುಲೇಟರ್ ಇದ್ದರೆ ಕ್ಷಣಮಾತ್ರದಲ್ಲಿ ಉತ್ತರಿಸುವ ಜಾಣ್ಮೆ ತೋರುವುದು ಹಾಸ್ಯಸ್ಪದ. 
ಬ್ರೇನ್ ಟೀಸರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಕುತೂಹಲಕಾರಿ ಒಗಟುಗಳು, ಬುದ್ಧಿವಂತಿಕೆ ಪರೀಕ್ಷಿಸುವ ಪ್ರಶ್ನಾವಳಿಗಳೂ ಮತ್ತು ಮನಸ್ಸಿಗೆ ಮುದ ನೀಡುವ ಗಣಿತದ ಸವಾಲುಗಳು ನೆಟ್ಟಿಗರನ್ನು ಉತ್ತರಿಸುವಂತೆ ಆಕರ್ಷಿಸುತ್ತವೆ. ಇವುಗಳಲ್ಲಿ, ಗಣಿತ ಆಧರಿತ ಪ್ರಶ್ನೆಗಳು ಬಹುತೇಕರ ಕುತೂಹಲವನ್ನು ಹೆಚ್ಚಿಸುತ್ತವೆ. ಉತ್ತರ ಗೊತ್ತಿರದಿದ್ದರೂ ಇದನ್ನು ಹೇಗಾದರೂ ಮಾಡಿ ಬಿಡಿಸಬೇಕು, ಇದಕ್ಕೆ ಉತ್ತರ ಕಂಡುಕೊಳ್ಳಬೇಕು ಎಂದು ನಾನಾ ಕಸರತ್ತು ನಡೆಸುತ್ತಾರೆ. ಸದ್ಯ ಈ ಮೇಲ್ಕಂಡ ಬ್ರೇನ್​ ಟೀಸರ್​ ಕೂಡ ಜಾಲತಾಣದಲ್ಲಿ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಯನ್ನು ಗಳಿಸಿದ್ದು, ಉತ್ತರಿಸಲು ಪರದಾಡುವಂತೆ ಮಾಡಿದೆ.

ಹೀಗಿದೆ ಲೆಕ್ಕಾಚಾರದ ಪ್ರಶ್ನೆ 66÷11-5+55 = ?

ಮೇಲ್ಕಂಡ ಗಣಿತದ ಒಗಟಿಗೆ ನಿಮ್ಮ ಉತ್ತರದ ಹುಡುಕಾಟ ಶುರುವಾಗಲಿ. ನಿಮ್ಮ ಉತ್ತರವನ್ನು ಕಮೆಂಟ್​ ಬಾಕ್ಸ್​ನಲ್ಲಿ ತಿಳಿಸಿ.

ಇದೇ ಉತ್ತರ ಸಿಕ್ಕಿತೇ?

ಸರಿಯಾದ ಉತ್ತರ: 61
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net