ಪೊಲೀಸರಿಂದ ಮತ್ತೊಂದು ಶಾಕ್‌; ಏ.29 ರವರೆಗೆ ರಜತ್​ಗೆ ನ್ಯಾಯಾಂಗ ಬಂಧನ| Biggboss

Case filed against vinay gowda rajat kishan
Published on

Biggboss| ಸೋಷಿಯಲ್‌ ಮೀಡಿಯಾದಲ್ಲಿ ಲಾಂಗ್‌ ಹಿಡಿದು ರೀಲ್ಸ್ ಮಾಡಿದ ಪ್ರಕರಣ ಸಂಬಂಧ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್​ನನ್ನು ಮತ್ತೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ರಜತ್‌ಗೆ ಪೊಲೀಸರು ನೋಟಿಸ್ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಕಾರಣ 2 ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಗೈರಾಗಿದ್ದಕ್ಕೆ ಕೋರ್ಟ್ ಎನ್‌ಬಿಡಬ್ಲ್ಯೂ ಕೂಡ ಜಾರಿ ಮಾಡಿತ್ತು. ಇದೀಗ ಕೋರ್ಟ್‌ ಆದೇಶದ ಮೇರೆಗೆ ರಜತ್‌ನನ್ನ ಮತ್ತೆ ಬಂಧನ ಮಾಡಲಾಗಿದೆ.

ಆರೋಪಿ ರಜತ್‌ರನ್ನು ಬಂಧಿಸಿದ ಪೊಲೀಸರು ಮಲ್ಲೇಶ್ವರಂ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು. ಆ ಬಳಿಕ ಕೋರ್ಟ್‌ ವಿಚಾರಣೆಗೆ ಹಾಜರುಪಡಿಸಲಾಯಿತು. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ರಜತ್‌ ಅವರಿಗೆ ಏಪ್ರಿಲ್‌ 29ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಇದನ್ನೂ ಓದಿ: ಮೆಟ್ರೋ ರೈಲಿನೊಳಗೆ ಒಬ್ಬರನ್ನೊಬ್ಬರು ಥಳಿಸಿಕೊಂಡು ಯುವಕರ ಹುಚ್ಚಾಟ| delhi

ಏನಿದು ಪ್ರಕರಣ?

ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ಗೌಡ ಮತ್ತು ರಜತ್​ ಇಬ್ಬರೂ ರೀಲ್ಸ್​ ಮಾಡುವ ಸಂದರ್ಭದಲ್ಲಿ ಮಚ್ಚು ಹಿಡಿದುಕೊಂಡು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಹೀಗಾಗಿ ಇವರಿಬ್ಬರ ಮೇಲೆ ​ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಇದಾದ ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದರೆ, ರಜತ್​ ಹಾಗೂ ವಿನಯ್​ ಫೈಬರ್​ ಮಚ್ಚು ನೀಡಿ ಪೊಲೀಸರಿಗೆ ಯಾಮಾರಿಸಿದ್ದರು. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗಿ ಹುಡುಕಾಟ ನಡೆಸುತ್ತಿದ್ದರು. ನಂತರ ಈ ಪ್ರಕರಣದಲ್ಲಿ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್​ ಆದೇಶ ಹೊರಡಿಸಿದ್ದು, ತಲಾ 10 ಸಾವಿರ ರೂ. ಶ್ಯೂರಿಟಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಜತ್​ನನ್ನ ಮತ್ತೆ ಬಂಧನ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net