ಪರಪ್ಪನ ಅಗ್ರಹಾರ ಜೈಲಿನ ಭದ್ರತೆಯಲ್ಲಿ ಮತ್ತೆ ಲೋಪ

ನಗದು, 2ಮೊಬೈಲ್, ಮೂರು ಸಿಮ್ ಕಾರ್ಡ್ ಪತ್ತೆ
Parappan agrahar
Parappan agrahar
Published on: 

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಕಳ್ಳ ಸಾಗಣೆ ದಂಧೆ ನಿರಂತರವಾಗಿ ನಡೆಯುತ್ತಿದ್ದು ಮತ್ತೆ ಎರಡು ಪ್ರತ್ಯೇಕ ಎ್ಐಆರ್‌ಗಳು ದಾಖಲಾಗಿವೆ. ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಹಲುವು ಪ್ರಶ್ನೆಗಳು ಉದ್ಬವಿಸಿವೆ.

ಜೈಲಿನೊಳಗೆ 11,500 ರೂ.ಕಳ್ಳಸಾಗಣೆ ಮಾಡಲು ಯತ್ನಿಸಿದ ವಿಚಾರಣಾಧೀನ ಮಹಿಳಾ ಕೈದಿ ಹಾಗೂ ಇಬ್ಬರು ಸಜಾಬಂಧಿಗಳ ಬ್ಯಾರಕ್‌ನಲ್ಲಿ ಎರಡು ಮೊಬೈಲ್ ಪೋನ್, ಮೂರು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಚಾರಣಾಧೀನ ಕೈದಿಯಾಗಿರುವ ವಿದೇಶಿ ಮಹಿಳೆ ಆಗ್ನೇಸ್ ನಂಬಲಿರಾವ್ ಅವರನ್ನು ಅ.12ರಂದು ಕೋರ್ಟ್ ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ವಾಪಸ್ ಜೈಲಿಗೆ ಕರೆದುಕೊಂಡು ಬಂದಾಗ ಜೈಲಿನ ಮುಖ್ಯ ದ್ವಾರದಲ್ಲಿ ಸಿಬ್ಬಂದಿ ನಡೆಸಿದ ಕಡ್ಡಾಯ ತಪಾಸಣೆಯ ವೇಳೆ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಜೈಲಿನೊಳಗೆ ಹಣ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮಹಿಳಾ ಕೈದಿ ಯಾರ ಕಣ್ಣಿಗೂ ಬೀಳದಂತೆ ಅತ್ಯಂತ ಚಾಣಾಕ್ಷತನದಿಂದ ಹಣವನ್ನು ಬಚ್ಚಿಟ್ಟುಕೊಂಡು ಒಳನುಗ್ಗಲು ಯತ್ನಿಸಿದ್ದಾಳೆ. ಜೈಲು ಸಿಬ್ಬಂದಿ ತಪಾಸಣೆ ವೇಳೆ ನಗದು ಹಣ ಪತ್ತೆಯಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಕಾರಾಗೃಹ ಅಧೀಕ್ಷಕ ಬಿ.ಎಂ.ಕೊಟ್ರೇಶ್ ಎಂಬುದು ನೀಡಿದ ದೂರಿನ ಮೇರೆಗೆ ಸಜಾಬಂಧಿ ಕೈದಿ ಮಾಲತೇಶ್ ಎಂಬುವರ ಟವರ್-2 ಬ್ಯಾರಕನ ನಾಲ್ಕನೇ ಕೊಠಡಿಯಲ್ಲಿ ಒಂದು ಮೊಬೈಲ್, ಸಿಮ್ ಕಾರ್ಡ್ ಪತ್ತೆಯಾಗಿದೆ. ಅದೇ ವೇಳೆ ಸಿ ಬ್ಯಾರಕ್‌ನ 5ನೇ ಕೊಠಡಿಯಲ್ಲಿ ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ ಮಹಮ್ಮದ ನವಾಜ್ ಎಂಬಾತನು ಟೋಪಿಯೊಳಗೆ ಮುಚ್ಚಿಟ್ಟದ ಮೂರು ಸಿಮ್ ಕಾರ್ಡ್, ಒಂದು ಮೊಬೈಲ್ ಪತ್ತೆಯಾಗಿದೆ. ನಿಷೇಧಿತ ವಸ್ತುಗಳು ಜೈಲಿನ ಒಳಗೆ ಹೇಗೆ ಬಂದಿವೆ. ಅವುಗಳ ಪೂರೈಕೆ ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಜೈಲು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net