

ಮೀರತ್: ಉತ್ತರ ಪ್ರದೇಶದಲ್ಲಿ ಇನ್ನೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 3ರಂದು ಕಿಡ್ನ್ಯಾಪ್ ಆಗಿದ್ದ ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆಕೆಯನ್ನು ಪ್ರೀತಿಯ ಹೆಸರಿನಲ್ಲಿ ಅಬ್ದುಲ್ಲಾ (42) ಎಂಬಾತ ಅಪಹರಿಸಿದ್ದ ಎಂದು ಗೊತ್ತಾಗಿದೆ.
ಈ ಅಬ್ದುಲ್ಲಾ ಹಿಂದುವಿನಂತೆ ವೇಷ ಹಾಕಿ ಹಿಂದು ಹುಡುಗಿಯರನ್ನು ಆಕರ್ಷಿಸುತ್ತಿದ್ದ. ಫೇಸ್ಬುಕ್ನಲ್ಲಿ ಕೂಡ ಹಿಂದು ಹೆಸರಿನಲ್ಲಿಯೇ ಅಕೌಂಟ್ ಕ್ರಿಯೇಟ್ ಮಾಡಿದ್ದ. ತಾನಿನ್ನೂ ಯುವಕನಂತೆ ಕಾಣಬೇಕು ಎಂದು ವಿಗ್ ಹಾಕಿಕೊಂಡು ಫೋಟೋ ತೆಗೆದು ಅಪ್ಲೋಡ್ ಮಾಡುತ್ತಿದ್ದ. ಇದನ್ನೂ ಓದಿ: ರೋಗಿಯ ಹಲ್ಲು ತೆಗೆದ ವೈದ್ಯನಿಗೆ 12 ವರ್ಷ ಜೈಲು; ಇಂಥ ಎಡಬಿಡಂಗಿಯನ್ನು ನೀವು ನೋಡಿರಲಿಕ್ಕಿಲ್ಲ…!
ಹಾಗೇ ಈ ಬಾಲಕಿಯನ್ನೂ ನಂಬಿಸಿದ್ದ. ಸೆಪ್ಟೆಂಬರ್ 3ರಂದು ಮೀರತ್ನ ಕಂಕರ್ಖೇಡಾದಿಂದ ಕರೆದುಕೊಂಡುಹೋಗಿದ್ದ. ಈಗಾಗಲೇ ಮೂರು ಹೆಂಡತಿಯರು, ನಾಲ್ಕು ಮಕ್ಕಳಿದ್ದಾರೆ. ಈ ಬಾಲಕಿಯನ್ನು ಮದುವೆಯಾಗಬೇಕು ಎಂದು ಬಯಸಿ, ಹಿಂದುವಿನಂತೆ ವೇಷ ಧರಿಸಿ ಅಪಹರಿಸಿದ್ದೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.
ಬಾಲಕಿ ಕಾಣೆಯಾಗಿದ್ದಾಳೆ ಎಂದು ಕುಟುಂಬದವರು ನೀಡಿದ್ದ ದೂರಿನ ಅನ್ವಯ ಪೋಲಿಸರು ಆಕೆಯನ್ನು ಹುಡುಕಲು ತಂಡವನ್ನು ರಚಿಸಿದ್ದರು. ಇಂದು ಅಬ್ದುಲ್ಲಾನನ್ನು ಬಂಧಿಸಿ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)