ಮತ್ತೋರ್ವ ಐಐಟಿ-ಜೆಇಇ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದಲ್ಲಿ 22 ನೇ ಪ್ರಕರಣ

crime
Published on

ಬಿಹಾರ: ಗಯಾ ಜಿಲ್ಲೆಯಲ್ಲಿ ಐಐಟಿ-ಜೆಇಇ ಅಭ್ಯರ್ಥಿಯ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಮೃತ 18 ವರ್ಷದ ಯುವಕ. ಮಂಗಳವಾರ ತನ್ನ ಪಿಜಿ ಕೊಠಡಿಯ ಬಾಗಿಲಿಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ ಎಂದು ಮಹಾವೀರ್ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪರಂಜೀತ್ ಪಟೇಲ್ ತಿಳಿಸಿದ್ದಾರೆ.

ಐಐಟಿ-ಜೆಇಇ ಅಭ್ಯರ್ಥಿಯನ್ನು ವಾಲ್ಮೀಕಿ ಪ್ರಸಾದ್ ಎಂದು ಗುರುತಿಸಲಾಗಿದೆ. ಕಳೆದ ಶೈಕ್ಷಣಿಕ ಅವಧಿಯಿಂದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದು, ಮಹಾವೀರ್ ನಗರದ ಪಿಜಿಯಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದ್ದು, ನಂತರ ಪೊಲೀಸರು ಶವವನ್ನು ವಶಪಡಿಸಿಕೊಂಡರು. ಮರಣೋತ್ತರ ಪರೀಕ್ಷೆಗಾಗಿ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯ (ಎನ್‌ಎಂಸಿಎಚ್) ಶವಾಗಾರದಲ್ಲಿ ಇರಿಸಲಾಗಿದೆ.

ಕೊಠಡಿಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಕಾರಣವನ್ನು ಇನ್ನೂ ತನಿಖೆ ಮಾಡಬೇಕಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಈ ತಿಂಗಳೊಂದರಲ್ಲೇ ಕೋಟಾದಲ್ಲಿ ಇಬ್ಬರು IIT-JEE ಆಕಾಂಕ್ಷಿಗಳು ಮತ್ತು ಒಬ್ಬ NEET-UG ಆಕಾಂಕ್ಷಿ ಸೇರಿದಂತೆ ಇತರ ಮೂವರು ಕೋಚಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಜನವರಿಯಿಂದ ಅಂತಹ ಪ್ರಕರಣಗಳ ಸಂಖ್ಯೆ 20 ಕ್ಕೆ ಏರಿದೆ. ಕಳೆದ ವರ್ಷ, ಕೋಚಿಂಗ್ ಹಬ್‌ನಲ್ಲಿ ಸುಮಾರು 15 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net