ರಾಜ್ಯದಲ್ಲಿ ಮತ್ತೊಂದು ವಿಗ್ರಹ ಧ್ವಂಸ ಪ್ರಕರಣ; ಅದೇ ಸ್ಥಳದಲ್ಲಿ ಶಿಲುಬೆ ಆಕಾರ ರಚನೆ..

Temple
Published on

ಕೋಲಾರ: ಇತ್ತೀಚೆಗೆ ಬೆಂಗೂಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಾಗದೇವರ ಮೂರ್ತಿ ಧ್ವಂಸಗೊಳಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿತ್ತು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಇನ್ನೊಂದು ದೇವರ ವಿಗ್ರಹವನ್ನು ಧ್ವಂಸ ಮಾಡಲಾಗಿದೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ದ್ಯಾಪಸಂದ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ. ದ್ಯಾಪಸಂದ್ರದ ಉದ್ದೇಕಲ್ಲುಗುಟ್ಟದ ಬಳಿ ಇದ್ದ ಮುನೇಶ್ವರಸ್ವಾಮಿ ದೇವಾಲಯದಲ್ಲಿನ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಧ್ವಂಸಗೊಳಿಸಲಾದ ವಿಗ್ರಹವನ್ನು ದೇವಾಲಯದಿಂದ ಹೊರಗೆ ಎಸೆದ ಕಿಡಿಗೇಡಿಗಳು, ವಿಗ್ರಹವಿದ್ದ ಜಾಗದಲ್ಲಿ ಕೋಲಿನಿಂದ ಶಿಲುಬೆಯಾಕೃತಿ ರಚನೆ ಮಾಡಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ದ್ಯಾಪಸಂದ್ರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಮಾಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net