ರಘುವಂಶಿ ಪ್ರಕರಣದಂತೆ ಮತ್ತೊಂದು ಕೇಸ್​​: ಪ್ರಿಯಕರನೊಂದಿಗೆ ಗಂಡನನ್ನು ಕೊಂದು ಪರ್ವತದ ಕಂದಕಕ್ಕೆ ಎಸೆದ ಸಿಂಧು! | Raghuvanshi

dk - 2025-06-21T093420.185
Published on

Raghuvanshi: ಮೆಘಾಲಯದ ಇಂದೋರ್​ನಲ್ಲಿ ನಡೆದ ರಾಜಾ ರಘುವಂಶಿ (ಹನಿಮೂನ್​​) ಪ್ರಕರಣದಂತೆ ಇದೀಗ ಅಂಥದ್ದೇ ಪ್ರಕರಣವೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಂದು ಆತನ ಶವವನ್ನು ಬೆಟ್ಟಗಳಲ್ಲಿ ಎಸೆದ ಆರೋಪದ ಮೇಲೆ ಮೃತನ ಪತ್ನಿ ಸಿಂಧು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ರಾಜೋಕ್ರಿ ನಿವಾಸಿ ರವೀಂದರ್ ಕುಮಾರ್(56) ಅವರು ಜೂನ್ ಆರಂಭದಲ್ಲಿ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದಾರೆಂದು ಯಾರಿಗೂ ತಿಳಿದಿರಲಿಲ್ಲ. ಆದಾಗ್ಯೂ, ಜೂ.5 ರಂದು ಉತ್ತರಾಖಂಡದಲ್ಲಿ ಪೊಲೀಸರು ಶವವನ್ನು ವಶಪಡಿಸಿಕೊಂಡಾಗ ನಿಗೂಢತೆ ಬಗೆಹರಿಯಿತು. ನಂತರ ಶವವನ್ನು ರವೀಂದರ್ ಕುಮಾರ್ ಎಂದು ಗುರುತಿಸಲಾಯಿತು. ಇದು ಅವರ ಪತ್ನಿ ರೀನಾ ಸಿಂಧು ಮತ್ತು ಅವರ ಪ್ರೇಮಿ ಪರಿತೋಷ್ ರೂಪಿಸಿದ ಆಘಾತಕಾರಿ ಕೊಲೆ ಸಂಚನ್ನು ಬಹಿರಂಗಪಡಿಸಿದೆ.

ಪ್ರೀತಿಯಲ್ಲಿ ಬಿದಿದ್ದ ರೀನಾ ಸಿಂಧು!

ರವೀಂದರ್ ಕುಮಾರ್ 20 ವರ್ಷಗಳ ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ ಸಿಂಧು ಅವರನ್ನು ವಿವಾಹವಾಗಿದ್ದರು ಮತ್ತು ಇತ್ತೀಚೆಗೆ ಪತ್ನಿ ಸಿಂಧು ಪರಿತೋಷ್ ಎಂಬ ಪ್ರೇಮಿಯೊಂದಿಗೆ ಪ್ರೇಮಾಂಕುರವಾಯಿತು. ಆಸ್ತಿ ವಿವಾದ ಮತ್ತು ವೈವಾಹಿಕ ಕಲಹವನ್ನು ಒಳಗೊಂಡ ಹಿನ್ನೆಲೆ ಆಕೆ ಕೊಂದಿದ್ದಾಳೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಕೊಲ್ಲಲು ಕಾರಣ

ಮೃತ ಪತಿ ರವೀಂದರ್ ಕುಮಾರ್ ತಮ್ಮ ಆಸ್ತಿಗಳಿಂದ ಸುಮಾರು 1 ಲಕ್ಷ ರೂ. ಬಾಡಿಗೆ ಗಳಿಸುತ್ತಿದ್ದರು. ಆದರೆ, ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾದಾಗ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದಾಗ ಅವರ ಜೀವನ ಬದಲಾಯಿತು. 18 ಲಕ್ಷ ರೂ. ಸಾಲವನ್ನು ಮರುಪಾವತಿಸಲು ಅವರು ಆಸ್ತಿಗಳಲ್ಲಿ ಒಂದನ್ನು ಮಾರಾಟ ಮಾಡಲು ನಿರ್ಧರಿಸಿದರು. ಈ ವಿಚಾರಕ್ಕೆಮ ಇಬ್ಬರ ನಡುವೆ ಪದೇಪದೆ ಜಗಳವಾಡುತ್ತಿದ್ದರು. ಆರೋಪಿ ಪತ್ನಿ ಸಿಂಧು ಕುಮಾರ್ ತನ್ನ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಯಲು ಪ್ರಯತ್ನಿಸಿದ್ದಳು. ಕೆಲವು ತಿಂಗಳ ಹಿಂದೆ, ಆರೋಪಿ ಪತ್ನಿ ಸಿಂಧು ಮತ್ತು ಪರಿತೋಷ್ ಕುಮಾರ್ ಅವರನ್ನು ಕೊಲ್ಲಲು ಮತ್ತು ಅವರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದರು ಎನ್ನಲಾಗಿದೆ.

ಕೊಲೆ ಮಾಡಿದ್ದೇಗೆ..?

ಇದೇ ಮೇ.31ರಂದು ಸಿಂಧು ಉತ್ತರ ಪ್ರದೇಶದ ನಗೀನಾದಲ್ಲಿರುವ ತನ್ನ ಪ್ರಿಯಕರ ಪರಿತೋಷ್ ಮನೆಗೆ ಪಾರ್ಟಿ ನೆಪದಲ್ಲಿ ಕರೆಸಿಕೊಂಡಿದ್ದಳು. ತನ್ನ ಪತಿ ರವೀಂದರ್ ಕುಮಾರ್​ಗೆ ಮದ್ಯ ಕುಡಿಸಿದಳು ಮತ್ತು ನಂತರ ಇಬ್ಬರೂ ಸಲಿಕೆಯಿಂದ ಅವನ ಕುತ್ತಿಗೆ ಮತ್ತು ಎದೆಗೆ ಹೊಡೆದು ಕೊಂದರು.

ಅಲ್ಲಿಂದ ಮೃತ ದೇಹವನ್ನು ಉತ್ತರಾಖಂಡದ ಕೋಟ್‌ದ್ವಾರಕ್ಕೆ ಕೊಂಡೊಯ್ಯಲಾಯಿತು. ಬೆಳಗಿನ ಕತ್ತಲೆಯಲ್ಲಿ, ಆರೋಪಿಗಳು ಶವವನ್ನು ದುಗಡ್ಡ ಬಳಿ ರಸ್ತೆಯಿಂದ ಎಸೆದು ಪರಾರಿಯಾಗಿದ್ದರು.

ಪ್ರಕರಣ ಭೇದಿಸಿದ್ದೇಗೆ..?

ಕುಮಾರ್ ಅವರ ಜೇಬಿನಲ್ಲಿ ದೊರೆತ ಚೀಟಿಯಿಂದ ಅಂತಿಮ ಪುರಾವೆ ಸಿಕ್ಕಿದ್ದು, ಅದು ಅವರನ್ನು ಅತಿಥಿಗೃಹಕ್ಕೆ ಸಂಪರ್ಕಿಸಿದೆ. ಈ ನಿರ್ಣಾಯಕ ಸುಳಿವು ಕೋಟ್ದ್ವಾರ ಪೊಲೀಸರಿಗೆ ಸಿಂಧು ಮತ್ತು ಪರಿತೋಷ್ ಅವರನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಕೊನೆಗೂ ತನಿಖೆಯಲ್ಲಿ ಕೊಲೆ ಮಾಡಿದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net