ಬರಹಗಳಿಂದಲೇ ಗೃಹಿಣಿಯರಿಗೆ ಹಣ ಗಳಿಸುವ ಅವಕಾಶ !

books
Published on


ಬೆಂಗಳೂರು: ಪ್ರತಿಲಿಪಿ ಸ್ವಪ್ರಕಾಶನ ಸಂಸ್ಥೆಯು ಬರಹಗಳ ಪ್ರಕಟಣೆ ಮಾಡುವುದರ ಜತೆಗೆ, ಬರಹಗಳಿಂದಲೇ ಗೃಹಿಣಿಯರಿಗೆ ಹಣಗಳಿಸುವ ಅವಕಾಶ ಮಾಡಿಕೊಟ್ಟಿದೆ.
ಕನ್ನಡವೂ ಸೇರಿ ಭಾರತದ 10 ಭಾಷೆಗಳಲ್ಲಿ ಹೊಸ ಕ್ರಾಂತಿ ಪ್ರತಿಲಿಪಿಯಿಂದ ಆಗುತ್ತಿದೆ. ಇದರಿಂದ ಹವ್ಯಾಸಕ್ಕಾಗಿ ಬರೆಯುತ್ತಿದ್ದ ಲೇಖಕ ಲೇಖಕಿಯರು ಮಾಸಿಕ ನಿರೀಕ್ಷೆಗೂ ಮೀರಿದ ವರಮಾನ ಗಳಿಸಬಹುದಾಗಿದೆ. ಇದರಲ್ಲಿ ಪ್ರಮುಖವಾಗಿ ಗೃಹಿಣಿಯರಿಗೆ ತಮ್ಮ ಭಾವನೆ, ಕಲ್ಪನೆ ಮತ್ತು ವಿಚಾರಗಳನ್ನು ಹೇಳಿಕೊಳ್ಳಲು ವೇದಿಕೆ ಒದಗಿಸಿದೆ.
ಹವ್ಯಾಸಕ್ಕಾಗಿ ಬರೆಯುವ ಅಭ್ಯಾಸ ಇಟ್ಟುಕೊಂಡವರಿಗೆ ಮೊಬೈಲ್/ಕಂಪ್ಯೂಟರ್ ಮೂಲಕ ತಾವು ವ್ಯಯಿಸಿದ ಸಮಯಕ್ಕೆ ಪ್ರತಿಯಾಗಿ, ಹಣ ಗಳಿಸಬಹುದಾಗಿದೆ. ಭಾರತದಾದ್ಯಂತ 12 ಭಾಷೆಗಳಲ್ಲಿ ತಮ್ಮ ಪ್ರತಿಲಿಪಿಯ ಬರಹಗಳಿಂದ ಹಣ ಗಳಿಸುತ್ತಿರುವವರ ಸಂಖ್ಯೆ ಈಗ ಹಲವು ಸಾವಿರದಷ್ಟಿದೆ.
ನಿತ್ಯ 12-14 ಗಂಟೆಗಳನ್ನು ವ್ಯಯಿಸಿ ಧಾರಾವಾಹಿಗಳಾಗಿ ಪ್ರಕಟವಾಗುತ್ತಿರುವ ತಮ್ಮ ಕಾದಂಬರಿಗಳ 4-5 ಅಧ್ಯಾಯಗಳನ್ನು ಪ್ರಕಟಿಸುವವರೂ ಇದ್ದಾರೆ. ಅನಿವಾರ್ಯ ಕಾರಣಗಳಿಂದ ಧಾರಾವಾಹಿಗಳ ಹೊಸ ಅಧ್ಯಾಯಗಳನ್ನು ಪ್ರಕಟಿಸಲಾಗದಿದ್ದಲ್ಲಿ, ಪ್ರತಿಲಿಪಿಯಲ್ಲಿ ಲಭ್ಯವಿರುವ ಷೆಡ್ಯೂಲಿಂಗ್ ಸೌಲಭ್ಯ ಬಳಸಿಕೊಂಡು ಆಯಾ ದಿನದ ನಿಗದಿತ ವೇಳೆಯಲ್ಲಿ ಅಧ್ಯಾಯ ಪ್ರಕಟಿಸುವ ಅವಕಾಶ ಇರುವುದರಿಂದ ಓದುಗರು ನಿತ್ಯ ತಮ್ಮ ಮೆಚ್ಚಿನ ಧಾರಾವಾಹಿಗಳನ್ನು ಓದಬಹುದಾಗಿದೆ.
ಓದುಗರು ತಾವು ಓದುತ್ತಿರುವ ಧಾರಾವಾಹಿಯ ಅಧ್ಯಾಯ ಪೂರ್ತಿಯಾಗಿ ಓದಿದಲ್ಲಿ ಮರುದಿನ ಅದರ ಮುಂದಿನ ಅಧ್ಯಾಯ ಅನ್ಲಾಕ್ ಆಗುತ್ತದೆ. ಪ್ರೀಮಿಯಂ ಅಡಿಯಲ್ಲಿರುವ ಧಾರಾವಾಹಿಗಳ ಎಲ್ಲ ಅಧ್ಯಾಯಗಳನ್ನೂ ಒಟ್ಟಿಗೇ ಓದಬಯಸಿದಲ್ಲಿ ಆಯಾ ಲೇಖಕ/ಲೇಖಕಿಯರ ಸೂಪರ್ ಫ್ಯಾನ್ ಆಗಿ ಸಬ್ಸ್ಕ್ರೈಬ್ ಮಾಡಿ ಓದಬಹುದು ಅಥವಾ ವೇದಿಕೆ ಹಂತದಲ್ಲಿ ಪ್ರೀಮಿಯಂ ಯೋಜನೆಯನ್ನು ಸಬ್ಸ್ಕ್ರೈಬ್ ಮಾಡಿ ಓದಬಹುದು. ಹೀಗೆ ಸಬ್ಸ್ಕ್ರಿಪ್ಷನ್ ನವೀಕರಣಗೊಳಿಸುತ್ತಿರುವವರ ಶೇಕಡಾವಾರು ಪ್ರಮಾಣವೂ ತಿಂಗಳಿನಿಂದ ತಿಂಗಳಿಗೆ ವರ್ಧಿಸುತ್ತಿದ್ದು, ಇದರಿಂದ ಮಾಸಿಕ 10ರಿಂದ 50 ಸಾವಿರ ರೂ.ವರೆಗೂ ಆದಾಯ ಹೊಂದುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net