ಸುಂಟಿಕೊಪ್ಪ ಗ್ರಾಮ ದೇವರ ವಾರ್ಷಿಕ ಮಹೋತ್ಸವ

IMG-20250307-WA0227
ಸುಂಟಿಕೊಪ್ಪ ಗ್ರಾಮ ದೇವರ ಆರನೇ ವಾರ್ಷಿಕೋತ್ಸವ ಪ್ರಯುಕ್ತ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿತ್ತು.
Published on

ಸುಂಟಿಕೊಪ್ಪ: ಪಟ್ಟಣದ ಗ್ರಾಮ ದೇವರ ಸಮಿತಿಯ ವತಿಯಿಂದ ಗ್ರಾಮ ದೇವರ 6ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ವಿವಿಧ ದೇವಾಲಯ ಸಮಿತಿಗಳ ಸಹಭಾಗಿತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು.

ಅರ್ಚಕ ಮಂಜುನಾಥ್ ಶರ್ಮಾಬ ಅವರ ನೇತೃತ್ವದಲ್ಲಿ ಬೆಳಗ್ಗೆ ಸ್ಥಳ ಶುದ್ಧಿ ಕಲಶ ಪೂಜೆ ನಡೆಯಿತು. ನಂತರ ಗ್ರಾಮ ದೇವತೆಗೆ ಎಳನೀರು, ಹಾಲು, ಕುಂಕುಮ, ಜೇನು, ಗಂಧ, ತುಪ್ಪದ ಅಭಿಷೇಕ ನೆರವೇರಿತು. ಆ ಬಳಿಕ ದೇವರಿಗೆ ವಸ್ತ್ರಾಲಂಕಾರ ಮತ್ತು ಹೂವಿನ ಅಲಂಕಾರ ಪೂಜೆ ನಡೆಯಿತು. ಬೆಳಗ್ಗೆ 9.30 ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನಂತರ ಗ್ರಾಮ ದೇವತೆಗೆ ಅರ್ಪಣೆ ನಡೆದು, ಮಧ್ಯಾಹ್ನದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯವನ್ನು ವಿವಿಧ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಗ್ರಾಮ ದೇವರ ಸೇವಾ ಸಮಿತಿ ಅಧ್ಯಕ್ಷ ಎ.ಶ್ರೀಧರ್‌ಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಖಜಾಂಚಿ ದಿನು ದೇವಯ್ಯ, ಉಪಾಧ್ಯಕ್ಷರಾದ ಬಿ.ಡಿ.ರಾಜು ರೈ, ಜೆ.ಎನ್.ಚಂದ್ರಶೇಖರ್, ಸಲಹಾ ಸಮಿತಿಯ ಎ.ಲೋಕೇಶ್‌ಕುಮಾರ್, ಶಾಂತರಾಮ್ ಕಾಮತ್, ಬಸವರಾಜು, ಅಶೋಕ್ ಶೇಠ್, ಸಂಘಟನಾ ಕಾರ್ಯದರ್ಶಿಗಳಾದ ಧನು ಕಾವೇರಪ್ಪ, ಸುನಿಲ್, ಸಹ ಕಾರ್ಯದರ್ಶಿ ಎ.ಶ್ರೀಧರನ್, ಅಯ್ಯಪ್ಪ, ಪಟ್ಟೆಮನೆ ಕುಟುಂಬಸ್ಥರಾದ ಪಿ.ಪಿ.ಉದಯಕುಮಾರ್, ಪಟ್ಟೆಮನೆ ಸದಾಶಿವ, ಸದಾಶಿವ ರೈ, ಸಂತೋಷ್, ರವಿ, ಶಿವಕುಮಾರ್, ಸಿ.ಸಿ.ಸುನಿಲ್, ಎಂ.ಆರ್.ಶಶಿಕುಮಾರ್, ಬಿ.ಕೆ.ಪ್ರಶಾಂತ್ ಸೇರಿದಂತೆ ಉಪಸ್ಥಿತರಿದ್ದರು.

ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀರಾಮ ಸೇವಾ ಸಮಿತಿ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿ-ಗಣೇಶೋತ್ಸವ ಸಮಿತಿ, ಶ್ರೀ ಮಸಣಿಕಮ್ಮ ದೇವಸ್ಥಾನ ಸಮಿತಿ, ಶ್ರೀ ವೃಕ್ಷೋದ್ಭವ ಮಹಾಗಣಪತಿ ದೇವಾಲಯ ಸಮಿತಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ, ಶ್ರೀದೇವಿಯ ಅಣ್ಣಪ್ಪ ದೇವಸ್ಥಾನ ಸಮಿತಿ, ಶ್ರೀ ಬಾಳೆಕಾಡು ಮುತ್ತಪ್ಪ ದೇವಸ್ಥಾನ, ಶ್ರೀ ಗದ್ದೆಹಳ್ಳ ಕೊಡಂಗಲ್ಲೂರು ದೇವಸ್ಥಾನ ಸಮಿತಿ, ಶ್ರೀ ಕುರುಂಬ ಭಗವತಿ ದೇವಾಲಯ ಸಮಿತಿ, ಶ್ರೀ ಮದುರಮ್ಮ ಬಡಾವಣೆಯ ನಾಗದೇವತೆ ಸೇವಾ ಸಮಿತಿ, ಶ್ರೀ ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಶ್ರೀ ಗದ್ದೆಹಳ್ಳದ ಬಸವೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net