ಬಲ್ಲಮಾವಟಿ ಭಗವತಿ ದೇವರ ವಾರ್ಷಿಕ ಹಬ್ಬ

28..NPK.1
ನಾಪೋಕ್ಲು ಸಮೀಪದ ಬಲ್ಲಮಾವಟಿ ಭಗವತಿ ದೇವಾಲಯದಲ್ಲಿ ಉತ್ಸವದ ಅಂಗವಾಗಿ ದೇವರ ನೃತ್ಯ ಪ್ರದರ್ಶನ ಜರುಗಿತು.
Published on

ನಾಪೋಕ್ಲು : ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ಜರುಗಿತು. ಗ್ರಾಮಸ್ಥರು, ಭಕ್ತರು ದೇವಾಲಯದಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸಿದರು. ಮಧ್ಯಾಹ್ನ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ಪ್ರದಕ್ಷಿಣೆ ಮಹಾಪೂಜೆ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ದೇವರ ನೃತ್ಯಬಲಿ ಜರುಗಿತು. ಉತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ ಭಕ್ತರು ದೇವರಿಗೆ ವಿವಿಧ ಪೂಜೆ, ಹರಕೆ, ಕಾಣಿಕೆ ಒಪ್ಪಿಸಿದರು.

ಗುರುವಾರ ಸಂಜೆ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮತ್ತು ದೇವಾಲಯದಲ್ಲಿ ದೇವರ ನೃತ್ಯಬಲಿ ನಡೆಯಿತು. ಪೂಜಾ ವಿಧಿವಿಧಾನಗಳನ್ನು ದೇವಾಲಯದ ಅರ್ಚಕ ಶಶಿಧರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net