23ಕ್ಕೆ ಜಿಲ್ಲಾ ಜಂಗಮ ಮಹಿಳಾ ಘಟಕದ ವಾರ್ಷಿಕೋತ್ಸವ

jangama samaja
Published on

ಶಿವಮೊಗ್ಗ: ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಮಾ.23ರ ಬೆಳಗ್ಗೆ 9.30ಕ್ಕೆ ಜಿಲ್ಲಾ ಜಂಗಮ ಮಹಿಳಾ ಘಟಕದ ವಾರ್ಷಿಕೋತ್ಸವ ಮತ್ತು ವಿಶ್ವ ಮಹಿಳಾ ದಿನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜಂಗಮ ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ನಾಗಭೂಷಣ ಹೇಳಿದರು.

ಮಹಿಳಾ ಸಾಧಕಿ ಪೂರ್ಣಿಮಾ ಬಸವರಾಜ್, ಉದ್ಯಮಿ ಸುಧಾ ಎಸ್.ಎಸ್.ಜ್ಯೋತಿಪಕಾಶ್, ಜಿಲ್ಲಾ ಜಂಗಮ ಸಮಾಜದ ಮಹಾ ಪೋಷಕರಾದ ಪಾರ್ವತಮ್ಮ ಪಂಚಾಕ್ಷರಯ್ಯ, ಬಸಮ್ಮ, ಅನ್ನಪೂರ್ಣಮ್ಮ, ಮೀನಾಕ್ಷಿ, ವಿಜಯರತ್ನಾ, ಉಮಾಮಹೇಶ್ವರಿ, ಚನ್ನಮ್ಮ ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಗುವುದು. ಮಹಿಳಾ ಘಟಕದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪೂರ್ಣಿಮಾ ಬಸವರಾಜ್, ಅನ್ನಪೂರ್ಣಮ್ಮ, ವಿಜಯಾಂಬಿಕಾ, ವಿಜಯಲಕ್ಷ್ಮೀ, ತ್ರಿವೇಣಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net