

ಶಿವಮೊಗ್ಗ: ಬೊಮ್ಮನಕಟ್ಟೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 12ನೇ ವಾರ್ಷಿಕೋತ್ಸವ ಜೂ.9ರಂದು ನಡೆಯಲಿದೆ ಎಂದು ಶ್ರೀ ಅನ್ನಪೂರ್ಣೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಜಿ.ಕೆ.ಮಾಧವಮೂರ್ತಿ ತಿಳಿಸಿದರು.
ಶ್ರೀ ಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಶ್ರೀಗಳನ್ನು ಬೆಳಗ್ಗೆ 10ಕ್ಕೆ ಎಂಆರ್‌ಎಸ್ ವೃತ್ತದಿಂದ ಬೈಕ್ ರ‌್ಯಾಲಿ ಮೂಲಕ ದೇವಸ್ಥಾನದ ಆವರಣಕ್ಕೆ ಕರೆತಂದು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಂಭಾಭಿಷೇಕ, ಚಂಡಿಕಾ ಹೋಮ, ಕಲಾತತ್ವ, ಮಹಾಮಂಗಳಾರತಿ ನಡೆದ ನಂತರ ಶ್ರೀಗಳು ಆಶೀರ್ವಚನ ನೀಡುವರು. ನಂತರ ಮಹಾಪ್ರಸಾದ ಇರುತ್ತದೆ. ಸಂಜೆ 5ಕ್ಕೆ ಶ್ರೀಚಕ್ರ ನವಾವರಣ ಪೂಜೆ, ನಂತರ ಅನುಗ್ರಹದ ಲ ಮಂತ್ರಾಕ್ಷತೆ ವಿತರಿಸಲಾಗುವುದು. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ 51 ಅಡಿ ಎತ್ತರದ ರಾಜಗೋಪುರದ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.