

ಕೊಪ್ಪ: ಹಿಂದು ಮಹಿಳೆಯರಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸಲು ಸ್ನೇಹ ಸೌರಭ ಎಂಬ ವೇದಿಕೆ ರಚಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಟಿ.ವಿ. ಶ್ರೀಮತಿ ನಾಗರಾಜ್ ತಿಳಿಸಿದರು.
ಪಟ್ಟಣದ ಹೊರ ವಲಯದ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಐದನೇ ವರ್ಷದ ವೇದಿಕೆ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ವೇದಿಕೆ ಮೂಲಕ ಮಹಿಳೆಯರ ಪ್ರತಿಭೆಗಳನ್ನ ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಹಿಂದು ಮಹಿಳೆಯರನ್ನು ಒಗ್ಗೂಡಿಸಿ ಸಹಬಾಳ್ವೆಯ ಜೀವನ ನಡೆಸಲು ವೇದಿಕೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ಭಾಗ್ಯಾ ಪ್ರಕಾಶ್, ಸಹನಾ ನಾಗೇಂದ್ರ, ಗಾಯತ್ರಿ ಸತ್ಯನಾರಾಯಣ, ಸಂಧ್ಯಾ ವೆಂಕಟೇಶ್, ಗಾಯತ್ರಿ ವಸಂತ್, ವಾಣಿ ಸತೀಶ್ ಇದ್ದರು.