ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಟನೆಯ ಅರಬ್ಬೀ ಚಿತ್ರದ ಟ್ರೈಲರ್ ರಿಲೀಸ್

Arabbi Trailer
Published on

ಬೆಂಗಳೂರು: ಕರ್ನಾಟಕದ ಸಿಂಘಂ ಎಂದೇ ಖ್ಯಾತಿ ಪಡೆದಿರುವ ಮಾಜಿ ಎಪಿಎಸ್​ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅಭಿನಯದ ಚೊಚ್ಚಲ ಕನ್ನಡ ಚಿತ್ರ ಅರಬ್ಬೀಯ ಟ್ರೈಲರ್​ ಬಿಡುಗಡೆಯಾಗಿದೆ.

2020ರಲ್ಲಿ ಐಪಿಎಸ್​ ಹುದ್ದೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡ ಬಳಿಕ ಅಣ್ಣಾಮಲೈ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಕೆಲವು ಆಕ್ಷನ್ ದೃಶ್ಯಗಳಲ್ಲಿ ಸಹ ಅವರು ಪಾಲ್ಗೊಂಡಿದ್ದರು. ಇದೀಗ ಆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಚಿತ್ರದ ನಾಯಕನಿಗೆ ಇಲ್ಲಿ ಎರಡೂ ಕೈಗಳೇ ಇಲ್ಲ. ಆದರೆ ಎರಡೂ ಕೈಗಳೇ ಇಲ್ಲದ ಈ ಹೀರೋಗೆ ರಿಯಲ್ ಲೈಫ್‌ನಲ್ಲಿ ಪೊಲೀಸ್ ಆಫೀಸರ್ ಆಗಿದ್ದ ಅಣ್ಣಾಮಲೈ ಎಲ್ಲ ಅನ್ನೋದು ಇಲ್ಲಿ ವಿಶೇಷವಾಗಿಯೇ ಕಾಣಿಸುತ್ತದೆ. ನಿಜ ಜೀವನದಲ್ಲಿ ಹೇಗೆ ಇದ್ದಾರೋ ಅದೇ ರೀತಿನ ಸಿನಿಮಾದಲ್ಲಿ ಅಣ್ಣಾಮಲೈ ಕಾಣಿಸಿಕೊಂಡಿದ್ದಾರೆ. ಫೈಟಿಂಗ್ ಕೂಡ ಮಾಡಿ ಗಮನ ಸೆಳೆದಿದ್ದಾರೆ.

Arabbi Trailer

ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಕನ್ನಡಿಗ ಕೆಎಸ್ ವಿಶ್ವಾಸ್ ಅವರ ಜೀವನದ ಬಗ್ಗೆ ನಿರ್ಮಿಸಲಾಗಿರುವ ಅರಬ್ಬೀ ಸಿನಿಮಾ ಕೈಗಳು ಇಲ್ಲದ ನಾಯಕ ಸಮಾಜದಲ್ಲಿ ಹೇಗೆ ಸಮಸ್ಯೆಗಳನ್ನು ಎದುರಿಸಿದರು. ಅದೆಲ್ಲವನ್ನೂ ಮೆಟ್ಟಿನಿಂತು ಹೇಗೆ ಮೇಲೆ ಬಂದರು, ಸಾಧನೆ ಮಾಡಿದರು. ಅವರಿಗೆ ಸ್ಪೂರ್ತಿ, ಸಹಾಯ ಮಾಡಿದವರು ಯಾರು ಎಂಬಿತ್ಯಾದಿ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ.

ಅರಬ್ಬೀ ಸಿನಿಮಾನಲ್ಲಿ ವಿಶ್ವಾಸ್​ರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಅಣ್ಣಾಮಲೈ ಕೆಲವು ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್ ಡೈಲಾಗ್​ಗಳನ್ನು, ಸ್ಪೂರ್ತಿದಾಯಕ ಡೈಲಾಗ್​ಗಳನ್ನು ಸಹ ಸಿನಿಮಾದಲ್ಲಿ ಹೇಳಿದ್ದಾರೆ. ಅರಬ್ಬೀ ಸಿನಿಮಾವನ್ನು ಆರ್ ರಾಜ್​ಕುಮಾರ್ ನಿರ್ದೇಶನ ಮಾಡಿದ್ದು, ಸಿಎಸ್ ಚೇತನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸಹ ನಿರ್ಮಾಣವನ್ನು ಅನಿತಾ ಸಿದ್ಧೇಶ್ವರ್ ಮಾಡಿದ್ದಾರೆ. ಸಿನಿಮಾಕ್ಕೆ ಕಂಬದ ರಂಗ ಸಂಗೀತ ನೀಡಿದ್ದಾರೆಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net