ಆ ಮಾಜಿ ಸಿಎಂ ದೇಶದ್ರೋಹಿ..ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ವೈರಲ್​!

palani
Published on

ಚೆನ್ನೈ: ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ಎಐಎಡಿಎಂಕೆಯನ್ನು ಆ ಪಕ್ಷದ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮುಳುಗಿಸುತ್ತಿದ್ದಾರೆ. ಅವರೊಬ್ಬ ದೇಶದ್ರೋಹಿ ಎಂಬ ಹೆಸರು ಗಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.

ವಿಕ್ರವಾಂಡಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಪರವಾಗಿ ಸ್ಪರ್ಧಿಸಿರುವ ಪಿಎಂಕೆ ಅಭ್ಯರ್ಥಿ ಅನ್ಬುಮಣಿ ಶುಕ್ರವಾರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ಉಪಚುನಾವಣೆಯಲ್ಲು ಬಹಿಷ್ಕರಿಸುವ ಮೂಲಕ ಎಐಎಡಿಎಂಕೆ ರಾಷ್ಟ್ರ ವಿರೋಧಿ ನಿಲುವು ತಳೆದಿರುವ ಪಕ್ಷಗಳನ್ನು ಬೆಂಬಲಿಸಿದೆ ಎಂದರು.

ಬಿಹಾರ ಮತ್ತು ಕರ್ನಾಟಕದಲ್ಲಿ ಅಲ್ಲಿನ ಸರ್ಕಾರಗಳು ಜಾತಿ ಗಣತಿ ನಡೆಸುತ್ತಿರುವಾಗ, ಡಿಎಂಕೆ ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ. ಹಾಗಾಗಿಯೇ ಮುಖ್ಯಮಂತ್ರಿ ಸ್ಟಾಲಿನ್ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲವು ಸ್ವಾರ್ಥಿ ಶಕ್ತಿಗಳು ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆಯನ್ನು ನಾಶಮಾಡಲು ಮುಂದಾಗಿವೆ. ಎಡಪ್ಪಾಡಿ ನೇತೃತ್ವದಲ್ಲಿ 2019ರಿಂದ ಎಐಎಡಿಎಂಕೆ ಸತತವಾಗಿ ಎಲ್ಲಾ ಚುನಾವಣೆಗಳಲ್ಲಿ ಸೋಲುತ್ತಿದೆ ಎಂದು ಅಣ್ಣಾಮಲೈ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net