ಅನ್ನದಾತನ ಅಳಲು ಕಿರುಚಿತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯ

21-RNR-01
Published on

ರಾಣೆಬೆನ್ನೂರ: ಇಲ್ಲಿಯ ಕಲಾವಿದ ಗುರುರಾಜ ಶಿರಹಟ್ಟಿ ಬರೆದು ನಿಮಿರ್ಸಿದ ಅನ್ನದಾತನ ಅಳಲು ಕಿರುಚಿತ್ರಕ್ಕೆ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ಧಾರವಾಡದ ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ, ಕಾವ್ಯಶ್ರೀ ಚಾರಿಟೆಬಲ್​ ಟ್ರಸ್ಟ್​ ವತಿಯಿಂದ ಕಲಾವಿದರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್​ನ ಸಭಾಂಗಣದಲ್ಲಿ ಪ್ರಶಸ್ತಿ ನೀಡಲಾಯಿತು.

ಕಥೆ, ಚಿತ್ರಕಥೆ, ಸಂಭಾಷಣೆ ಚಿತ್ರ ನಿಮಾರ್ಣಕ್ಕಾಗಿ ಕಲಾವಿದ ಗುರುರಾಜ ಶಿರಹಟ್ಟಿ, ನಿರ್ದೇಶನಕ್ಕಾಗಿ ಸುನೀಲ ದೇವರಗುಡ್ಡ, ಅಭಿನಯಕ್ಕಾಗಿ ಶಂಕರ ತುಮ್ಮಣ್ಣನವರ ಹಾಗೂ ಶಶಿಕಲಾ ಅಕ್ಕಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ---.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net