ಸಿರಿಗೆರೆ: ಶ್ರಾವಣ ಮಾಸದ ಮೊದಲನೆಯ ಶನಿವಾರ ಶಿವನಾರದಮುನಿ ಸ್ವಾಮಿ ದೇವಸ್ಥಾನದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಭಾಗಿಯಾಗಿದ್ದರು. ಬೆಳಗ್ಗೆ ಅಭಿಷೇಕದ ನಂತರ ದೇವರನ್ನು ಅಲಂಕರಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.