ಬಿಪಿಎಲ್​ ಕಾರ್ಡ್​ದಾರರೇ, ಅನ್ನಭಾಗ್ಯ ಯೋಜನೆ ಸ್ವರೂಪ ಬದಲಾಗ್ತಿದೆ.. ಇನ್ಮುಂದೆ 2 ಕೆಜಿ ಅಕ್ಕಿ ಕೊಡ್ತಾರೆ...

annabhagya
Published on

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಸ್ವರೂಪವೇ ಬದಲಾಗಲಿದೆ. ಪ್ರತಿ ಸದಸ್ಯನಿಗೆ ಉಚಿತವಾಗಿ ಕೊಡುತಿದ್ದ 5 ಕೆಜಿ ಅಕ್ಕಿಗೆ ಕತ್ತರಿ ಬೀಳಲಿದೆ!

ಪ್ರತಿ ತಿಂಗಳು ಫಲಾನುಭವಿಗಳಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿ ಹಾಗೂ ಗೋಧಿಗೆ 2-3 ರೂ. ದರ ನಿಗದಿ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆಯೇ ಅಕ್ಕಿ ಕಡಿತಗೊಳಿಸಿ ಹೊಸ ಧಾನ್ಯ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರದಿಂದ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ಪಡೆದಿದೆ.

ಏ.1ರಿಂದ ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿರುವ ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ, 3 ಕೆಜಿ ಜೋಳ, ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ನೀಡಲಾಗುತ್ತದೆ. ಇನ್ನು ದಕ್ಷಿಣ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿರುವ ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟಾರೆ ಪಡಿತರ ಕಡಿತದಿಂದ ಪ್ರತಿ ವರ್ಷ ಸರ್ಕಾರಕ್ಕೆ 800 ಕೋಟಿ ರೂ. ಆರ್ಥಿಕ ಹೊರೆ ತಗ್ಗಲಿದೆ.

ತೊಗರಿಬೇಳೆ ಮರು ವಿತರಣೆ?: ಉತ್ಪಾದನೆ ಕುಂಠಿತ ಹಾಗೂ ದರ ಏರಿಕೆ ಹಿನ್ನೆಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ತೊಗರಿಬೇಳೆಯನ್ನು ವಿತರಿಸಲೂ ಚಿಂತನೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net