ಮೈದೊಳಲಿನಲ್ಲಿ ಆಂಜನೇಯ ಸ್ವಾಮಿ ತೇರು

Rathotsava
ರಾಮನವಮಿ ಅಂಗವಾಗಿ ಮೈದೊಳಲಿನಲ್ಲಿ ಜರುಗಿದ ಆಂಜನೇಯ ಸ್ವಾಮಿ ತೇರನ್ನು ಭಕ್ತರು ಎಳೆಯುತ್ತಿರುವುದು.
Published on

ಹೊಳೆಹೊನ್ನೂರು: ಸಮೀಪದ ಮೈದೊಳಲಿನಲ್ಲಿ ಗುರುವಾರ ಶ್ರೀರಾಮ ನವಮಿ ಪ್ರಯುಕ್ತ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕೆಂಡಾರ್ಚನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಬುಧವಾರ ಉಚ್ಚಯ್ಯ ಉತ್ಸವ ನಡೆಯಿತು. ಗುರುವಾರ ಮುಂಜಾನೆ ಜರುಗಿದ ರಥೋತ್ಸವದಲ್ಲಿ ವಿರಾಜಮಾನವಾಗಿ ಕುಳಿತ ಆಂಜನೇಯ ಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ಹಣ್ಣು-ಕಾಯಿ ಮಾಡಿಸಿ, ರಥ ಎಳೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಕೆಲವರು ರಥದ ಕಳಸಕ್ಕೆ ಬಾಳೆಹಣ್ಣು ಎಸೆದರು. ಹರಕೆ ಹೊತ್ತವರು ಮಕ್ಕಳ ಜವಳ ತೆಗೆಸಿ, ಕಾಣಿಕೆಗಳನ್ನು ಸಲ್ಲಿಸಿದರು. ಡೊಳ್ಳು, ತಮ್ಮಟೆ, ವೀರಗಾಸೆ ನೃತ್ಯ ಮೇಳಗಳು ರಾಜ ಬೀದಿ ಉತ್ಸವಕ್ಕೆ ಮೆರುಗು ನೀಡಿದವು. ಗ್ರಾಮಸ್ಥರು ಭಕ್ತರಿಗೆ ಕೋಸುಂಬರಿ ಹಾಗೂ ಪಾನಕ ಹಂಚಿದರು. ಸಂಜೆ ಗ್ರಾಮದ ಗಡಿ ಭಾಗದಲ್ಲಿ ಚರಗ ಚೆಲ್ಲುವುದರೊಂದಿಗೆ ರಥೋತ್ಸವ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net