ವಿಶ್ವದಾದ್ಯಂತ 500 ಕೋಟಿ ಗಡಿ ದಾಟಿದ ಅನಿಮಲ್; OTT ರಿಲೀಸ್​ ಡೇಟ್​ ಅನೌನ್ಸ್​

Animal
Published on

ಮುಂಬೈ: ಬಾಲಿವುಡ್​ ನಟ ರಣಬೀರ್​ ಕಪೂರ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​​ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿ ಬಾಚುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಚಿತ್ರ 500 ಕೋಟಿ ರೂಪಾಯಿ ಗಳಿಸಿದ್ದು, ಸಾವಿರ ಕೋಟಿಯನ್ನು ಬಾಚುವ ಗುರಿಯನ್ನು ಹೊಂದಿದೆ.

ಡಿಸೆಂಬರ್​ 01ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ದೊರೆತ್ತಿದ್ದು, ಹಲವೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇತ್ತ ಅನಿಮಲ್​ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದ್ದಾರೆ.  

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಿ, ಮೊದಲ ದಿನದಿಂದಲೇ ಹೊಸ ಗಳಿಕೆಯ ದಾಖಲೆಗಳನ್ನು ಮಾಡುತ್ತಿದ್ದು.. ಇಲ್ಲಿಯವರೆಗೆ ಈ ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ.ಗಳ ಗಡಿ ದಾಟಿದೆ. ಸದ್ಯ ಈ ದೊಡ್ಡ ಗಳಿಕೆಯ ನಡುವೆ, ಚಿತ್ರದ OTT ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿದೆ.

ಚಿತ್ರ ತೆರೆಗೆ ಬಂದ ಮೇಲೆ ಒಟಿಟಿ ಬಿಡುಗಡೆ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದು.. OTT ನಲ್ಲಿ ಬಿಡುಗಡೆ ಮಾಡಲು ಗಣರಾಜ್ಯೋತ್ಸವವನ್ನು ಅಂದರೆ ಜನವರಿ 26, 2024 ಅನ್ನು ಆಯ್ಕೆ ಮಾಡಿದ್ದಾರೆ. ಅನಿಮಲ್ ಚಿತ್ರದ OTT ಬಿಡುಗಡೆ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. 

ಅನಿಮಲ್ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಚಿತ್ರದ ಬಾಕ್ಸಾಫೀಸ್ ಗಳಿಕೆ ಯಥಾ ಪ್ರಕಾರ ಮುಂದುವರೆದಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net