

ಕೊಳ್ಳೇಗಾಲ: ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನರ್ ಅನಿಲ್ ಕುಂಬ್ಳೆ ಮತ್ತು ಅವರ ಪತ್ನಿ ಚೇತನಾ ರಾಮತೀರ್ಥ ಅವರು ತಾಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ಹಾಗೂ ಚಕ್ರ ಸಮೇತ ಶ್ರೀ ಪ್ರಸನ್ನ ಮೀನಾಕ್ಷಿ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದ್ದರು.
ಅನಿಲ್ ಕುಂಬ್ಳೆ ಮತ್ತು ಚೇತನಾ ರಾಮತೀರ್ಥ ದಂಪತಿ ಶಿವನಸಮುದ್ರ ಗ್ರಾಮದಲ್ಲಿರುವ ಚಕ್ರ ಸಮೇತ ಶ್ರೀ ಪ್ರಸನ್ನ ಮೀನಾಕ್ಷಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಸಮೀಪದ ಮಯೂರ ಹೋಟೆಲ್‌ನಲ್ಲಿ ಬೆಳಗಿನ ತಿಂಡಿ ಸವಿದು ಭರಚುಕ್ಕಿ ಜಲಪಾತವನ್ನು ವೀಕ್ಷಿಸಿದರು. ಈ ವೇಳೆ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನಿಲ್ ಕುಂಬ್ಳೆ ಅಚರ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.