

ರಾಣೆಬೆನ್ನೂರ: ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಒ ಕಾರ್ಯದಿಂದ ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಮಹಿಳೆಯರು ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಭವಿಷ್ಯದ ಬುನಾದಿಯಾಗಿದ್ದು, ಅವರಿಗೆ ಸರಿಯಾಗಿ ವೇತನ ಮತ್ತು ರಕ್ಷಣೆ ಇಲ್ಲವಾಗಿದೆ. ಈಗಾಗಲೇ ಮತದಾರರ ಗುರುತಿನ ಚೀಟಿ ಮಾಡಿಸಲಿಕ್ಕೆ ಅವರನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಅಂಗನವಾಡಿಯಲ್ಲಿ ಮಕ್ಕಳಿಗೆ ಮತ್ತು ಗಭಿರ್ಣಿಯರಿಗೆ ಪೌಷ್ಟಿಕ ಆಹಾರ ನೀಡಲು ತೊಂದರೆಯಾಗಿದೆ.
ಜಿಪಿಎಸ್ ಫೋಟೊ ತೆಗೆಯುವುದು ಮತ್ತಿತರ ಕೆಲಸದ ಒತ್ತಡದಿಂದ ಸರಿಯಾಗಿ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿಲ್ಲ. ಆದ್ದರಿಂದ ಸರ್ಕಾರ ತಕ್ಷಣದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಒ ಕೆಲಸದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಯಲ್ಲಪ್ಪ ಚಿಕ್ಕಣ್ಣನವರ, ರಾಜೇಶ ಅಂಗಡಿ, ಮಂಜುನಾಥ ಸಂಭೋಜಿ, ಲಲಿತಾ ಲಮಾಣಿ, ಶೈಲಮ್ಮ ಹರನಗಿರಿ, ದೇವರಾಜ ಗುತ್ತಲ, ವಿರುಪಾಕ್ಷಪ್ಪ ಮೆಡ್ಲೇರಿ, ರವಿ ಬೂದನೂರ, ಶಿವಾನಂದಪ್ಪ ಬೂದನೂರ, ದೀಪ ಲಮಾಣಿ, ಗಣೇಶಪ್ಪ ಲಮಾಣಿ, ಶಂಕ್ರಪ್ಪ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.