ಕಣ್ಣಿನ ರೆಪ್ಪೆಗಳು ಬೆಳ್ಳಗಾಗಿವೆ..ಎಲ್ಲಾ ಕಡೆ ಕಲೆಗಳು..ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ Andrea Jaremiah

Andrea Jeremiah
Published on

ಹೈದ್ರಾಬಾದ್​: ( Andrea Jaremiah ) ಇತ್ತೀಚಿಗೆ ಸಿನಿಮಾ ತಾರೆಯರು  ತಮ್ಮ ಆರೋಗ್ಯದ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.  ಇದೀಗ ನಟಿಯೊಬ್ಬರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ನಟಿ ಆಂಡ್ರಿಯಾ ಜೆರೆಮಿಯಾ  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಆಂಡ್ರಿಯಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆಂಡ್ರಿಯಾ ಜೆರೆಮಿಯಾ ಅವರು ಗಾಯಕಿಯಾಗಿ ಸಿನಿಮಾ ಪ್ರವೇಶಿಸಿ ನಂತರ ನಾಯಕಿಯಾಗಿ ಪ್ರೇಕ್ಷಕರ ಮನ ಕದ್ದ ತಾರೆ. ಅವರು ತಮಿಳು, ಮಲಯಾಳಂ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ.

ಅನ್ನಾ ಯಾಮ್ ರಸೂಲ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಆಂಡ್ರಿಯಾ. ಲೋಹಮ್, ಲಂಡನ್ ಬ್ರಿಡ್ಜ್, ಥೋಪಿಲ್ ಜೋಪ್ಪನ್ ಚಿತ್ರಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ. ತಮ್ಮ ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ ಆಂಡ್ರಿಯಾ ನಟನೆಗೆ ವಿದಾಯ ಹೇಳಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಆಂಡ್ರಿಯಾ ಅವರು ಸ್ವಯಂ ನಿರೋಧಕ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಪ್ರತಿ ದಿನ ಎದ್ದಾಗ ದೇಹದ ಮೇಲೆ ಹಲವು ಮಚ್ಚೆಗಳು ಕಾಣುತ್ತವೆ...ರಕ್ತ ಪರೀಕ್ಷೆಯಲ್ಲಿ ರೋಗ ಪತ್ತೆಯಾಗಿಲ್ಲ. ಈ ಸ್ಥಿತಿಗೆ ಮಾನಸಿಕ ಒತ್ತಡವೇ ಕಾರಣ ಎನ್ನಲಾಗಿದೆ. ಅನಾರೋಗ್ಯದ ಕಾರಣದಿಂದ ಸಿನಿಮಾದಿಂದ ದೂರ ಉಳಿದಿದ್ದೇನೆ ಎಂದ ಅವರು, ಸ್ವಲ್ಪ ಬಿಡುವಿನ ನಂತರ ಲವ್ ಬ್ರೇಕಪ್ ಆಗಿ ಡಿಪ್ರೆಶನ್​​ಗೆ ಹೋಗಿದ್ದಾರೆ ಎಂಬ ವರದಿಗಳು ಬಂದಿದ್ದವು.

ಈ ಕಾಯಿಲೆಗೆ ಸಂಬಂಧಿಸಿದ ಹಲವು ಗಾಯದ ಗುರುತುಗಳು ಇನ್ನೂ ಆಕೆಯ ಮೈಮೇಲೆ ಇವೆ.. ಮತ್ತು ಕಣ್ಣಿನ ರೆಪ್ಪೆಗಳು ಬೆಳ್ಳಗಿವೆ.. ಅಕ್ಯುಪಂಕ್ಚರ್ ಚಿಕಿತ್ಸೆಯು ತನಗೆ ಸಹಾಯ ಮಾಡಿದೆ ಎಂದು ಆಂಡ್ರಿಯಾ  ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net