ದೇವರ ಕೊರಳಲ್ಲಿದ್ದ ಮಂಗಳಸೂತ್ರ ಕದ್ದ ಕಳ್ಳ; ವಿಡಿಯೋ ನೋಡಿ..

Andhra Pradesh Thief Posing as Devotee Steals Mangalsutra off Temple Deity
Published on

ಆಂಧ್ರಪ್ರದೇಶ: ಏಲೂರು ಸತ್ರಂಪಾಡುವಿನ ಸೌಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಭಕ್ತನ ವೇಷದಲ್ಲಿ ಬಂದ ಕಳ್ಳನೊಬ್ಬ ದೇವರ ಕೊರಳಿನಲ್ಲಿದ್ದ ಮಂಗಳ ಸೂತ್ರ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ದೇವಸ್ಥಾನದಲ್ಲಿ ಹುಂಡಿ ಕದ್ದ ಕಳ್ಳನನ್ನು ನೋಡಿದ್ದೇವೆ ಆದರೆ, ವ್ಯಕ್ತಿಯೊಬ್ಬ ದೇವಿಯ ಕೊರಳಿನಲ್ಲಿದ್ದ ಮಂಗಳ ಸೂತ್ರ ಹೊಡೆದಿದ್ದಾನೆ. ಈ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ, ಕಳ್ಳ ಕಣ್ಣಿಗೆ ಬೀಳದಂತೆ ಜಾಣತನದಿಂದ ಮಾಸ್ಕ್ ಹಾಕಿಕೊಂಡಿದ್ದಾನೆ. ಆಂಧ್ರಪ್ರದೇಶ ರಾಜ್ಯದ ಏಲೂರು ಸತ್ರಂಪಾಡುವಿನ ಸೌಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.

ಒಬ್ಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸೌಭಾಗ್ಯಲಕ್ಷ್ಮಿ ದೇವಸ್ಥಾನ ಒಳಗೆ ಬಂದಿದ್ದಾನೆ. ಮೊದಲು ಅಮ್ಮನ ದರ್ಶನ ಪಡೆದು ಸ್ವಲ್ಪ ಹೊತ್ತು ಸುತ್ತಲೂ ನೋಡಿದನು. ಯಾರೂ ಇರದೆ ಇರುವುದನ್ನು ಗಮನಿಸಿ ದೇವಿಯ ವಿಗ್ರಹದ ಬಳಿ ಹೋಗಿ ದೇವಿಯ ಕೊರಳಲ್ಲಿದ್ದ ಮಂಗಳಸೂತ್ರವನ್ನು ಕದ್ದಿದ್ದಾನೆ. ಆ ವ್ಯಕ್ತಿ ದೇವಸ್ಥಾನಕ್ಕೆ ನುಗ್ಗಿ ದೇವಿಯ ಕೊರಳಲ್ಲಿದ್ದ ಮಂಗಳಸೂತ್ರವನ್ನು ಕದ್ದೊಯ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸ್ವಲ್ಪ ಸಮಯದ ನಂತರ ಅಮ್ಮಾವಾರಿಯ ಕುತ್ತಿಗೆಯಲ್ಲಿ ಮಂಗಳಸೂತ್ರ ಪತ್ತೆಯಾಗದ ಕಾರಣ ದೇವಸ್ಥಾನ ಸಂಘಟಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತ್ರೀಟೌನ್ ಸಿಐ ವೆಂಕಟೇಶ್ವರರಾವ್ ಹಾಗೂ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಅಮ್ಮಾವಾರಿಯ ಕೊರಳಲ್ಲಿದ್ದ ಮಂಗಳಸೂತ್ರವನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net