

ಆಂಧ್ರಪ್ರದೇಶ: ಕೆಟ್ಟದ್ದನ್ನು ಸುಟ್ಟು ಹಾಕಬೇಕು ಅಂತಾರೆ. ಅದೇ ಕೆಲಸವನ್ನು ಆಂಧ್ರಪ್ರದೇಶದ ಪೊಲೀಸರು ಮಾಡಿದ್ದು, ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿದ್ದಾರೆ.
ಅಕ್ರಮ ಮದ್ಯ ವಶಪಡಿಸಿಕೊಂಡಾಗ ಪೊಲೀಸರು ಅದನ್ನು ರಸ್ತೆಯಲ್ಲಿ ಚೆಲ್ಲಿ ಅಥವಾ ಆ ಬಾಟಲಿಗಳನ್ನು ಧ್ವಂಸಗೊಳಿಸುತ್ತಾರೆ. ಇನ್ನು ಕಳಪೆ ಹೆಲ್ಮೆಟ್, ಕರ್ಕಶ ಶಬ್ದ ಹೊಮ್ಮಿಸುವ ಸೈಲೆನ್ಸರ್ ವಶಪಡಿಸಿಕೊಂಡಾಗಲೂ ಪೊಲೀಸರು ಅವುಗಳನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ.
ಅದೇ ರೀತಿ ಈಗ ಮಾದಕವಸ್ತುಗಳ ವಿಷಯದಲ್ಲೂ ಮಾಡಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಅನಕಪಲ್ಲಿ ಬಳಿಯ ಕೋಡೂರು ಗ್ರಾಮದಲ್ಲಿ ಬರೋಬ್ಬರಿ 850 ಕೋಟಿ ರೂ. ಬೆಲೆಬಾಳುವ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಲಾಗಿದೆ.