ಈ ರಾಜ್ಯದಲ್ಲಿ ಆನ್​​ಲೈನ್​ ರಮ್ಮಿ, ಪೋಕರ್​ಗಳಿಗೂ ನಿಷೇಧ: ಸರ್ಕಾರದ ಮಹತ್ವದ ನಿರ್ಧಾರ

Rummy
Published on

ಕೇಂದ್ರ ಸರ್ಕಾರ ನಿನ್ನೆಯಷ್ಟೇ ಪಬ್​​ಜಿ ಸೇರಿ ಚೀನಾದ 118 ಆ್ಯಪ್​​ಗಳನ್ನು ನಿಷೇಧಿಸಿದೆ. ದೇಶದ ಸಾರ್ವಭೌಮತ್ವ, ಸುರಕ್ಷತೆ, ಸಮಗ್ರತೆ ದೃಷ್ಟಿಯಿಂದ ಬ್ಯಾನ್​ ಮಾಡಿದ್ದಾಗಿ ಹೇಳಿದೆ.

ಈ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಆನ್​ಲೈನ್​ ರಮ್ಮಿ, ಪೋಕರ್​ ಆಟಗಳನ್ನೂ ನಿಷೇಧಿಸಲು ನಿರ್ಧಾರ ಮಾಡಿದೆ. ಯುವಜನತೆಯ ಹಿತದೃಷ್ಟಿಯಿಂದ ಆನ್​​ಲೈನ್​ ರಮ್ಮಿ, ಪೋಕರ್ ಆಟಗಳನ್ನೂ ಬ್ಯಾನ್​ ಮಾಡುತ್ತಿರುವುದಾಗಿ ಹೇಳಿದೆ. ಇದನ್ನೂ ಓದಿ: ಫಾಸ್ಟ್​ಫುಡ್​ ಮಳಿಗೆ ಹೊರಗೆ ಲ್ಯಾಪ್​ಟಾಪ್​ ಹಿಡಿದು ಕುಳಿತಿದ್ದ ಬಾಲೆಯರಿಗೆ ಹರಿದು ಬಂತು ಒಂದು ಕೋಟಿ ರೂ. ನೆರವು..! ಏಕೆ ಗೊತ್ತೆ?

ಇಂದು ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಮ್ಮಿ, ಪೋಕರ್​ ನಿಷೇಧ ತೀರ್ಮಾನ ಕೈಗೊಳ್ಳಲಾಗಿದೆ.  ಕ್ಯಾಬಿನೆಟ್ ಮೀಟಿಂಗ್​ ನಂತರ ಸಚಿವ ಪೆರ್ನಿ ವೆಂಕಟರಾಮಯ್ಯನವರು ಈ ವಿಚಾರವನ್ನು ತಿಳಿಸಿದ್ದಾರೆ. ಆನ್​ಲೈನ್ ಜೂಜಾಟ ಯುವಕರ ದಾರಿ ತಪ್ಪಿಸುತ್ತದೆ. ಹಾಗಾಗಿ ಆನ್​​ಲೈನ್​ನಲ್ಲಿ ಇರುವ ಎಲ್ಲ ರೀತಿಯ ಜೂಜಾಟವನ್ನೂ ರಾಜ್ಯದಲ್ಲಿ ನಿಷೇಧಿಸುತ್ತೇವೆ ಎಂದು ಹೇಳಿದ್ದಾರೆ.

ನಿಷೇಧವಾದ ಮೇಲೆ ಕೂಡ ಈ ಜೂಜಾಟಗಳ ಸಂಘಟಕರು ಮುಂದುವರಿಸಲು ಪ್ರಯತ್ನಿಸಿ ಸಿಕ್ಕಿಬಿದ್ದರೆ, ಅವರಿಗೆ ಎರಡು ವರ್ಷ ಜೈಲು ಶಿಕ್ಷೆ, ದಂಡ ವಿಧಿಸಲಾಗುವುದು. ಹಾಗೇ, ಯಾರಾದರೂ ಮೊಬೈಲ್​​ನಲ್ಲಿ ಇಟ್ಟುಕೊಂಡು ಆಟ ಮುಂದುವರಿಸಿದರೆ ಅಂಥವರಿಗೆ ಆರು ತಿಂಗಳು ಶಿಕ್ಷೆ ಕಟ್ಟಿಟ್ಟಬುತ್ತಿ ಎಂದೂ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net