

ಕೊಡಗು: ಪುರಾತನ ಕಾಲದ ಚಿನ್ನಾಭರಣವುಳ್ಳ ನಿಧಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದ ಅಮ್ಮತಿ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದಲ್ಲಿ ನಡೆದಿದೆ.
<p>" class="alignnone size-full wp-image-1848547" height="743" src="https://www.vijayavani.net/wp-content/uploads/2023/11/WhatsApp-Image-2023-11-12-at-7.55.59-PM.jpeg" width="1080"/>
ಆನಂದಪುರ ಗ್ರಾಮದಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನಕಾಲದ ಈಶ್ವರ ದೇವಸ್ಥಾನವಿದ್ದು, ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಪ್ರಾಚಿನ ಕಾಲದ ಕೆಲ ವಸ್ತುಗಳು ಪತ್ತೆಯಾದವು.
ಪತ್ತೆಯಾದ ವಸ್ತುಗಳ ಒಳಗೆ ಚಿನ್ನದ ಆಭರಣಗಳು, ಹಳೆಯ ಕಾಲದ ಉಂಗುರ, ಖಡ್ಗ ಸೇರಿದಂತೆ ಪುರಾತನ ಕಾಲದ ಆಭರಣಗಳು ಪತ್ತೆಯಾಗಿವೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಹಾಗೂ ತಹಸೀಲ್ದಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
<p>" class="alignnone size-full wp-image-1848544" height="720" src="https://www.vijayavani.net/wp-content/uploads/2023/11/WhatsApp-Image-2023-11-12-at-7.55.23-PM.jpeg" width="1280"/>
ಪತ್ತೆಯಾದ ಆಭರಣಗಳನ್ನು ವಿರಾಜಪೇಟೆ ತಹಸೀಲ್ದಾರ್ ವಶಕ್ಕೆ ನೀಡಲಾಗಿದ್ದು, ಪ್ರಾಚ್ಯವಸ್ತು ಇಲಾಖೆಗೆ ನೀಡಿ ಸಂಶೋಧನೆಯ ಬಳಿಕ ಇದು ಎಷ್ಟು ವರ್ಷಗಳ ಹಿಂದಿನ ಆಭರಣಗಳೆಂಬುದು ಬೆಳಕಿಗೆ ಬರಲಿದೆ.