VIDEO: ನೆಲ ಅಗೆಯುವಾಗ ಸಿಕ್ಕ ಬುದ್ಧನ ಪುರಾತನ ವಿಗ್ರಹವನ್ನು ಕುಟ್ಟಿ ಪುಡಿಮಾಡಿದ ಪಾಕಿಗಳು...

Buddha
Published on

ಇಸ್ಲಮಾಬಾದ್​: ಪಾಕಿಸ್ತಾನದ ಖೈಬರ್​ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಸಿಕ್ಕ ಬುದ್ಧನ ಪುರಾತನ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ.

ಪಾಕ್​ನ ಮಾರ್ಡನ್​ ಜಿಲ್ಲೆಯ ತಖ್ತ್​ ಬಹಿ ಎಂಬಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುತ್ತಿದ್ದರು. ಈ ವೇಳೆ ಬುದ್ಧನ ಪುರಾತನ ಕಾಲದ ವಿಗ್ರಹವೊಂದು ಸಿಕ್ಕಿದೆ. ಆದರೆ ಅದನ್ನು ಅಲ್ಲಿಯೇ ಇದ್ದವರೆಲ್ಲ ಸೇರಿ ಧ್ವಂಸ ಮಾಡಿದ್ದಾರೆ. ಪ್ರತಿಮೆಯನ್ನೂ ತುಂಡುತುಂಡು ಮಾಡಿದ್ದಾರೆ. ಇದು ಮುಸ್ಲಿಮರಿಗೆ ಸಂಬಂಧಪಟ್ಟ ವಸ್ತುವಲ್ಲ. ಹಾಗಾಗಿ ಧ್ವಂಸ ಮಾಡಲಾಗಿದೆ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.

ನೆಲ ಅಗೆಯುತ್ತಿದ್ದಾಗ ಅಕಸ್ಮಾತ್​ ಆಗಿ ಸಿಕ್ಕ ಪ್ರತಿಮೆಯ ಬಗ್ಗೆ ಪಾಕಿಗಳು ಅಸಮಾಧಾನ ತೋರಿಸುತ್ತ, ದೊಡ್ಡದಾದ ಸುತ್ತಿಗೆಯಿಂದ ಅದನ್ನು ಪುಡಿಪುಡಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆ ಪ್ರತಿಮೆಯನ್ನು ಮೆಟ್ಟಿ ತುಳಿಯುವುದನ್ನೂ ವಿಡಿಯೋದಲ್ಲಿ ನೋಡಬಹುದು. ಗಿಲ್ಗಿಟ್​-ಬಲ್ಟಿಸ್ಥಾನ್ ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದೆ.

ವಿಡಿಯೋ ನೋಡಿದ ಕೆಪಿಕೆ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕ ಅಬ್ದುಲ್ ಸಮದ್ ಅವರು ಪ್ರತಿಕ್ರಿಯೆ ನೀಡಿ, ನಾವು ಶೀಘ್ರವೇ ಅವರನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಅಮಾವಾಸ್ಯೆಯಂದು ಗಂಗಾ ಸ್ನಾನ ಮಾಡಬೇಡಿ…’

ಹಾಗೇ, ಪ್ರತಿಮೆಯನ್ನು ಧ್ವಂಸ ಗೊಳಿಸಿದ ನಾಲ್ವರನ್ನೂ ಬಂಧಿಸಿದ್ದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರತಿಮೆ ಸಿಕ್ಕಿದ್ದು ಖೈಬರ್​ ಪಖ್ತುಂಕ್ವಾ ಪ್ರಾಂತ್ಯದ ಹಳೇ ಹೆಸರು ಗಾಂಧಾರಾ. ಅದು ಬೌದ್ಧ ಧರ್ಮದ ಅನುಯಾಯಿಗಳ ಪವಿತ್ರ ಸ್ಥಳವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net