2ನೇ ಮದುವೆಗೆ ರೆಡಿಯಾದ ಕನ್ನಡದ ಖ್ಯಾತ ನಿರೂಪಕಿ! chaitra vasudevan is ready to second marriage

chaitra vasudevan
Published on

chaitra vasudevan is ready to second marriage :  ಕನ್ನಡದ ಖ್ಯಾತ ನಿರೂಪಕಿ ಹಾಗೂ  ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿ ಚೈತ್ರಾ ವಾಸುದೇವನ್‌ ಅವರು ಮತ್ತೆ ಮದುವೆ ಆಗುತ್ತಿದ್ದಾರಂತೆ. ಈ ವಿಷಯವನ್ನು ಅವರು ಅಧಿಕೃತಪಡಿಸಿದ್ದಾರೆ.  ಚೈತ್ರಾ ಅವರ ಇನ್​ಸ್ಟಾಗ್ರಾಮ್​​ನಲ್ಲಿ ಈ ಕುರಿತಾಗಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಚೈತ್ರಾ ವಾಸುದೇವನ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ಎರಡನೇ ಮದುವೆ ಆಗುತ್ತಿರೋದಾಗಿ ಹೇಳಿದ್ದಾರೆ. “ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು ಸಂತೋಷದ ಸುದ್ದಿ ಹಂಚಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆಗೆ ಕಾಲಿಡುತ್ತೇನೆ — ನನ್ನ ವಿವಾಹದ ಸುಂದರ ಪ್ರಯಾಣ. ಈ ಮುಂದಿನ ಹೆಜ್ಜೆ ಹಾಕುವಾಗ, ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯು, ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ” ಎಂದು ಚೈತ್ರಾ ವಾಸುದೇವನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚೈತ್ರಾ ವಾಸುದೇವನ್‌ ಅವರು ಯಾರನ್ನು ಮದುವೆ ಆಗುತ್ತಿದ್ದಾರೆ, ಆ ಹುಡುಗನ ವೃತ್ತಿ ಏನು ಎಂಬುದು ಇನ್ನೂ ರಿವೀಲ್‌ ಮಾಡಿಲ್ಲ. ಅಂದಹಾಗೆ ಮಾರ್ಚ್‌ನಲ್ಲಿ ಮದುವೆ ಎಂದಿದ್ದು, ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಈ ವಿಡಿಯೋ  ನೋಡಿದ ನೆಟ್ಟಿಗರು ಈ ಜೋಡಿಗೆ ಶುಭಕೋರಿದ್ದಾರೆ.

ಡಿಗ್ರಿ ಮುಗಿಯುತ್ತಿದ್ದಂತೆ ಚೈತ್ರಾ ವಾಸುದೇವನ್‌ ಅವರು ಸತ್ಯ ನಾಯ್ಡು ಎನ್ನುವ ಉದ್ಯಮಿಯನ್ನು ಮದುವೆಯಾಗಿದ್ದರು. ಐದು ವರ್ಷಗಳ ಕಾಲ ಅವರು ಪತಿಯ ಜೊತೆಗೆ ಜೀವನ ನಡೆಸಿ, ಆಮೇಲೆ ಕೆಲವು ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ  ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net