ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಮದ್ವೆ ಫಿಕ್ಸ್​​! ಹುಡುಗ ಯಾರು ಗೊತ್ತಾ? anchor anushree wedding

Anushree
Published on

ಬೆಂಗಳೂರು: (anchor anushree wedding ) ಕನ್ನಡದ ನಟಿ, ನಿರೂಪಕಿ ಅನುಶ್ರೀ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅಗಷ್ಟ ತಿಂಗಳಿನಲ್ಲಿ ಉದ್ಯಮಿಯೊಬ್ಬರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಮೂಲಗಳಿಂದ ತಿಳಿದು ಬಂದಿದೆ.

ಆಗಸ್ಟ್ 28ಕ್ಕೆ ಕಾರ್ಪೋರೇಟ್ ಉದ್ಯಮಿ ಜೊತೆ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅವರು ವಿವಾಹ ಆಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಆಗಸ್ಟ್ 28ಕ್ಕೆ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಅನುಶ್ರೀ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಅನುಶ್ರೀ ಅವರು ಆ್ಯಂಕರ್ ಆಗಿ, ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net