ಆ್ಯಂಕರ್ ಅನುಶ್ರೀ ಕಲ್ಯಾಣ ! ಇಲ್ಲಿದೆ ಮದುವೆ ಫೋಟೋಸ್​..Anushree Roshan Marriage

Anushree Roshan Marriage (6)
Published on
Anushree Roshan Marriage :  ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಅನುಶ್ರೀ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರು ಮದುವೆ ಅದ್ದೂರಿತಯಾಗಿ ನಡೆದಿದ್ದು,  ಮದುವೆ ಸಂಭ್ರಮದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಮದುವೆಗೂ ಮುನ್ನಾದಿನವಾದ ಇಂದು ಹಳದಿ ಶಾಸ್ತ್ರದ ಫೋಟೋಗಳು ವೈರಲ್‌ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್‌ ಸು ಫ್ರಂ ಸೋ ಚಿತ್ರದ ʻಬಂದರೋ ಬಂದರೋ ಬಾವ ಬಂದರೋʼ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಆ್ಯಂಕರ್ ಅನುಶ್ರೀ ( Anushree Wedding )  ಅವರು ರೋಷನ್ ಜೊತೆ ಇಂದು (ಆಗಸ್ಟ್ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ಅದ್ದೂರಿಯಾಗಿ  ಬೆಂಗಳೂರಿನ ಹೊರ ವಲಯದಲ್ಲಿ ಇರುವ ಕಗ್ಗಲಿಪುರದ ರೆಸಾರ್ಟ್ ಒಂದರಲ್ಲಿ ನಡೆದಿದೆ.
ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು, ಕಲಾವಿದರು, ಚಿತ್ರೋದ್ಯಮದ ಗಣ್ಯರು ಆಗಮಿಸಿ ನವದಂಪತಿಗೆ ಶುಭಕೋರಿದ್ದಾರೆ.
Anushree Wedding

ಮೂಲತಃ ಉದ್ಯಮಿ ಆಗಿರುವ ರೋಷನ್ ಕೂರ್ಗ್‌ನ ನಿವಾಸಿಯಾಗಿದ್ದಾರೆ. ರೋಷನ್ ತಂದೆ ಹೆಸರು ರಾಮಮೂರ್ತಿ ಹಾಗೂ ತಾಯಿ ಹೆಸರು ಸಿಸಿಲಿಯಾ ಎಂದು. ಇದು ಲವ್‌ ಕಂ ಅರೇಂಜ್ಡ್‌ ಮ್ಯಾರೇಜ್‌ ಅಂತ ಹೇಳಲಾಗುತ್ತಿದೆ

Anushree Wedding

ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಅನುಶ್ರೀ, ʻಬಿಗ್‌ ಬಾಸ್‌ʼನಲ್ಲಿಯೂ ಸ್ಪರ್ಧಿಸಿದ್ದರು. ನಟಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿದ ಅನುಶ್ರೀ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಖಾಸಗಿವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

Anushree Wedding

ರೋಷನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

ಇಂದು ರೋಷನ್ ಜತೆ ಹಸೆಮಣೆ ಏರಿದ ಆ್ಯಂಕರ್ ಅನುಶ್ರೀ

ರೋಷನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net