

Ananya Panday: ಜೆನ್-ಝಡ್ ಖ್ಯಾತಿಯ ಅನನ್ಯಾ ಪಾಂಡೆ ಫ್ಯಾಷನ್ ಬಟ್ಟೆಗಳನ್ನು ತೊಟ್ಟು ಜನರನ್ನು ಗಮನ ಸೆಳೆಯುವುದು ಇದೇನು ಹೊಸದೇನಲ್ಲ. ಈ ಬಾರಿ, ಬಾಲಿವುಡ್ ನಟಿ,ಭಾರತದಲ್ಲಿನ ಏರ್ಬಿಎನ್ಬಿಯ ಮೊದಲ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಕತ್ತಲಲ್ಲೂ ಮಿನುಗುವ ಕೌಚರ್ ಗೌನ್ಗಳನ್ನು ಬಿಟ್ಟು, ಡೀಮರ್ ಸೊಬಗಿಗೆ ಒಲವು ತೋರಿದ್ದು, ಸಫಾರಿ-ಪ್ರೇರಿತ ಗ್ಲಾಮರ್ ಬಟ್ಟೆಯನ್ನು ತೊಟ್ಟು ಬಂದಿರುವುದು ಎಲ್ಲರನ್ನೂ ಅಚ್ಚರಿ ಮೂಡಿಸಿದೆ.
ಈ ಕಾರ್ಯಕ್ರಮಕ್ಕೆ ಆಗಮಿಸುವ ಸಲುವಾಗಿ ಬಾಲಿವುಡ್ ನಟಿ, ಅನನ್ಯಾ ಫ್ಯಾಷನ್ ಲೇಬಲ್ ಮಾಂಟ್ಸಾಂಡ್ನ ಚರಣಿಗೆಗಳಿಂದ ನೇರವಾಗಿ ಚಿಕ್ ಕೋ-ಆರ್ಡ್ ಸೆಟ್ ಅನ್ನು ಧರಿಸಿದ್ದರು. ಇನ್ನು ಇವರು ಧರಿಸಿದ್ದ ಕೋ-ಆರ್ಡ್ನಲ್ಲಿ ಕಾರ್ಸೆಟ್ ಶೈಲಿಯ ಬಸ್ಟಿಯರ್ ಟಾಪ್ ಹಾಗೂ ಅದಕ್ಕೆ ಹೊಂದಿಕೆಯಾಗುವ ಎ-ಲೈನ್ ಸ್ಕರ್ಟ್ನ್ನು ತೊಟ್ಟಿದ್ದರು. ಇನ್ನು ಈ ಬಟ್ಟೆಯಲ್ಲಿ ಮಣ್ಣಿನ ಬೀಜ್ ಮತ್ತು ಸೇಜ್ ಟೋನ್ಗಳಲ್ಲಿ ಸಫಾರಿ ಮೋಟಿಫ್ ಅನ್ನು ಒಳಗೊಂಡ ಸಂಕೀರ್ಣ ಮುದ್ರಣಗಳಿವೆ. ಕಾರ್ಸೆಟ್ ನಿಂದ ಪ್ರೇರಿತವಾದ ಮೇಲ್ಭಾಗವು ತೆಳುವಾದ ಪಟ್ಟಿಗಳು, ಮುಂಭಾಗದ ಬಟನ್-ಡೌನ್ ಮತ್ತು ಸೊಂಟದಲ್ಲಿ ಮೃದುವಾದ ಫ್ಲೇರ್ನೊಂದಿಗೆ ಹೊಂದಿಕೆಯಾಗಿತ್ತು. ಇದು ಫ್ರೆಂಚ್ ಟಾಯ್ಲೆಟ್ ಡಿ ಜೌಯ್ ತಂತ್ರವನ್ನು ಸೂಕ್ಷ್ಮವಾದ ಕಥೆಪುಸ್ತಕದಂತಹ ಚಿತ್ರಗಳೊಂದಿಗೆ ನೆನಪಿಸುವಂತ ತೊಡುಗೆಯನ್ನು ತೊಟ್ಟಿದ್ದಾರೆ.
ಇವರು ತೊಟ್ಟ ಬಟ್ಟೆಯ ಲುಕ್ ಸುಲಭವಾಗಿ ಕಾಣಲು ಸಿಗಬಹುದು. ಆದರೆ, ಆ ಬಟ್ಟೆಗೆ ಐಷಾರಾಮಿ ಬೆಲೆ ನೀಡಿದ್ದಾರೆ. ಇನ್ನು ಅನನ್ಯಾ ಮಾಂಟ್ಸಾಂಡ್ ಸಫಾರಿ-ಪ್ರಿಂಟ್ ಬಸ್ಟಿಯರ್ ಟಾಪ್ ಬೆಲೆ ಸುಮಾರು 25,686 ರೂ.ಮ್ಯಾಚಿಂಗ್ ಹೈ-ವೇಸ್ಟೆಡ್ ಎ-ಲೈನ್ ಸ್ಕರ್ಟ್ ಬೆಲೆ ಸುಮಾರು ರೂ. 23,944 ರೂ. ಒಟ್ಟಾರೆಯಾಗಿ, ಆ ಸೆಟ್ನ ಬೆಲೆ 50,000 ರೂ. ಎಂದು ತಿಳಿದುಬಂದಿದೆ.
ಅನನ್ಯಾ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗುಗೊಳಿಸುವ ಸಲುವಾಗಿ ರಾಯಲ್ ಓಕ್ ಫ್ರಾಸ್ಟೆಡ್ ಗೋಲ್ಡ್ ವಾಚ್ವೊಂದನ್ನು ತೊಟ್ಟಿದ್ದರು.ಇದು 18-ಕ್ಯಾರೆಟ್ ಹಳದಿ ಚಿನ್ನದಲ್ಲಿ ರಚಿಸಲಾಗಿದೆ. ಇನ್ನು ಇವರು ಸೊಗಸಾದ ಕಿವಿಯೋಲೆಗಳು ಮತ್ತು ಕೆಲವು ಉಂಗುರಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ಹೊರಬಂದಿದೆ. (ಏಜೆನ್ಸೀಸ್)