ಅನಂತಕುಮಾರ್ ಹೆಗಡೆ ಹೇಳಿಕೆ ಖಂಡನೀಯ

16 ಎಸ್ಕೆಪಿ 2
ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಕೆ.ಎಸ್.ಹುಚ್ಚರಾಯಪ್ಪ, ಬಿ.ಎಲ್.ರಾಜು, ಎಚ್.ಆರ್.ರಾಘವೇಂದ್ರ ಇತರರಿದ್ದರು.
Published on

ಶಿಕಾರಿಪುರ: ಸಂವಿಧಾನದ ಬಗ್ಗೆ ಗೌರವ ಇಲ್ಲದೆ ಪತ್ರಕರ್ತರಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ಅವರ ನಡೆ ಖಂಡನೀಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ಚರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಆನೆ ನಡೆದದ್ದೇ ದಾರಿ. ನಾಯಿಗಳು ಬೊಗಳುತ್ತಿರುತ್ತವೆ ಎಂದು ಮಾಧ್ಯಮದವರ ಕುರಿತು ಉದ್ಧಟತನದ ಮಾತುಗಳನ್ನು ಆಡಿರುವುದು ಆಕ್ಷೇಪಾರ್ಹ. ಕೂಡಲೇ ಸಂಸದರು ಕ್ಷಮೆ ಕೋರಬೇಕು ಹಾಗೂ ಸರ್ಕಾರ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಅಗ್ರಹಿಸಿದರು.
ಸಂಘದ ತಾಲೂಕು ಅಧ್ಯಕ್ಷ ಬಿ.ಎಲ್.ರಾಜು, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಇ.ಎಚ್.ಬಸವರಾಜು, ಪ್ರಧಾನ ಕಾರ್ಯದರ್ಶಿ ಎಚ್.ಆರ್.ರಾಘವೇಂದ್ರ, ಉಪಾಧ್ಯಕ್ಷ ಕೋಟೇಶ್ವರ, ಕಾರ್ಯದರ್ಶಿ ರಾಜಾರಾವ್ ಜಾದವ್, ಖಜಾಂಚಿ ಬಗನಕ್ಕಟ್ಟೆ ಮಂಜಪ್ಪ, ಸದಸ್ಯರಾದ ಎಚ್.ಎಸ್.ರಘು, ಎಚ್.ಕೆ.ಪ್ರಕಾಶ್, ಜಿ.ಕೆ.ಹೆಬ್ಬಾರ್, ಪ್ರದೀಪ್ ದೀಕ್ಷಿತ್, ಕಾಳಿಂಗ ರಾವ್, ಡಾ .ಐ.ಎಫ್.ಮಳಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net