ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ವಿವಾಹಪೂರ್ವ ಸಂಭ್ರಮ ಶುರು; ಅತಿಥಿಗಳಿಗೆ ರಾಜೋಪಚಾರ, ಯಾರೆಲ್ಲಾ ಭಾಗಿ? ಇಲ್ಲಿದೆ ಗಣ್ಯರ ಪಟ್ಟಿ

radhika
Published on

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್ ಅವರನ್ನು ಜುಲೈ 2024 ರಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಇದಕ್ಕೂ ಮುನ್ನ ಈ ಜೋಡಿಯ ವಿವಾಹಪೂರ್ವ ಕಾರ್ಯಕ್ರಮ ಮಾರ್ಚ್ 1-3 ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿದೆ. ಇದೀಗ ಅವರ ಮದುವೆ ಸಂಭ್ರಮದ ಬಗ್ಗೆ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ.

ವಿವಾಹಪೂರ್ವ ಡ್ರೆಸ್ ಕೋಡ್ 
ಇತ್ತೀಚೆಗೆ, 'ರೆಡ್ಡಿಟ್' ಬಳಕೆದಾರರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಆಚರಣೆಗಳ ಡ್ರೆಸ್ ಕೋಡ್ ಬಗ್ಗೆ ಮಾಹಿತಿ ನೀಡಿದರು. ಆಚರಣೆಯು ವಿಭಿನ್ನ ಡ್ರೆಸ್ ಕೋಡ್‌ಗಳನ್ನು ಹೊಂದಿರುವ ಮೂರು ದಿನಗಳ ಸುದೀರ್ಘ ಕಾರ್ಯಕ್ರಮವಾಗಿದೆ ಎಂದು ಕಾರ್ಡ್ ಬಹಿರಂಗಪಡಿಸಿದೆ. ಇದಕ್ಕೂ ಮುನ್ನ ಅತಿಥಿಗಳಿಗೆ ತಮ್ಮ ಉಡುಪುಗಳ ಬಗ್ಗೆ ತಿಳಿಸಲಾಯಿತು. ಕಾಕ್‌ಟೈಲ್ ಬಟ್ಟೆಗಳಿಂದ ಹಿಡಿದು ಕ್ಯಾಶುಯಲ್ಸ್​​​ ಮತ್ತು ಹೆರಿಟೇಜ್ ಇಂಡಿಯನ್ ಡ್ರೆಸ್‌ಗಳವರೆಗೆ, ದೇಸಿ ಮತ್ತು ಪಾಶ್ಚಿಮಾತ್ಯ ವಾರ್ಡ್‌ರೋಬ್‌ಗಳ ಮಿಶ್ರಣ ಇದು ಹೊಂದಿದೆ. ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕೂ ಮುನ್ನ, ಫೆಬ್ರವರಿ 15, 2024 ರಂದು 'ಲಗಾನ್ ಲಖ್ವಾನು' ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತ್ಯೇಕ ಚಾರ್ಟರ್ಡ್ ವಿಮಾನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪಾಲ್ಗೊಳ್ಳುವ ಅತಿಥಿಗಳಿಗೆ ಸ್ಥಳದಲ್ಲೇ ಇಸ್ತ್ರಿ, ಸ್ಟೀಮ್ ಐರನ್, ಹೇರ್ ಸ್ಟೈಲಿಸ್ಟ್, ಮೇಕಪ್ ಮ್ಯಾನ್​​ಗಳ ಸವಲತ್ತನ್ನು ನೀಡಲಾಗಿದೆ.

ವಿವಾಹಪೂರ್ವ ಪಾರ್ಟಿಯಲ್ಲಿ ಭಾಗವಹಿಸುವ ತಾರೆಯರು 
ಈ ಹಿಂದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಪಾರ್ಟಿಯಲ್ಲಿ ಕೆಲವು ಔಟ್ ಆಫ್ ದಿ ಬಾಕ್ಸ್ ಪ್ರದರ್ಶನಗಳು ಇರುತ್ತವೆ ಎಂದು ಮಾಧ್ಯಮ ವರದಿ ಹೇಳಿಕೊಂಡಿತ್ತು. ಮಾಹಿತಿಗಳ ಪ್ರಕಾರ, ಗ್ಲೋಬಲ್ ಐಕಾನ್ ರಿಹಾನ್ನಾ ಮತ್ತು ಪಂಜಾಬಿ ಪಾಪ್ ಐಕಾನ್ ದಿಲ್ಜಿತ್ ದೊಸಾಂಜ್ ಅವರು ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಪಾರ್ಟಿಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಇವರಲ್ಲದೆ ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಜನಪ್ರಿಯ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಪ್ರೀತಮ್ ಕೂಡ ಕಾರ್ಯಕ್ರಮ ನೀಡಲಿದ್ದಾರೆ. ಶಾರುಖ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ನೃತ್ಯ ಮಾಡಲಿದ್ದಾರೆ ಎಂದು ವರದಿಯಾಗಿದೆ. 

ಅಂಬಾನಿ ಅಭಿಮಾನಿಗಳ ಫ್ಯಾನ್ಸ್ ಪೇಜ್ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12, 2024 ರಂದು ಮುಂಬೈನಲ್ಲಿ ನಡೆಯಲಿದೆ. ಪ್ರತಿಯೊಬ್ಬರೂ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಪಾರ್ಟಿಗಾಗಿ ಎದುರು ನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net