170 ಕಿಮೀ 'ಪಾದಯಾತ್ರೆ' ಸಂಪೂರ್ಣ: ರಾಮನವಮಿಯಂದು ದ್ವಾರಕಾ ತಲುಪಿದ ಅನಂತ್ ಅಂಬಾನಿ! Anant Ambani completes 170-km padyatra

Anant Ambani
Published on

Anant Ambani completes 170-km padyatra: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ  ಜಾಮ್‌ನಗರದಿಂದ ಕೈಗೊಂಡಿದ್ದ ದ್ವಾರಕಾಧೀಶ ದೇವಸ್ಥಾನದವರೆಗೆ ಪಾದಯಾತ್ರೆ ಇಂದು ಪೂರ್ಣಗೊಂಡಿತು.

ಅನಂತ ಯಾತ್ರೆ ಮಾರ್ಚ್ 29 ರಂದು ಪ್ರಾರಂಭವಾಯಿತು. ದ್ವಾರಕಾ ಗುಜರಾತ್‌ನ ಜಾಮ್‌ನಗರದಿಂದ 170 ಕಿ.ಮೀ ದೂರದಲ್ಲಿದೆ.  ರಾಮ ನವಮಿಯ ದಿನವಾದ ಇಂದು ಅವರು ದ್ವಾರಕಾಧೀಶ ದೇವಸ್ಥಾನವನ್ನು ತಲುಪಿದರು.

ಅನಂತ್ ಅಂಬಾನಿ ಮಾತನಾಡಿ, ಪ್ರತಿ ಬಾರಿ ನಡೆಯುವಾಗಲೂ ದೈವಿಕ ನಾಮವನ್ನು ಜಪಿಸುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದೆ. ದ್ವಾರಕೆಯ ಪ್ರಭು ತಮ್ಮ ಮೇಲೆ ತೋರಿಸಿದ ದಯೆ,  ಶಕ್ತಿಯಿಂದ ಮಾತ್ರ ಇದು ಸಾಧ್ಯವಾಯಿತ್ತು ಎಂದಿದ್ದಾರೆ.

ಈ ಪ್ರಯಾಣ ಯಶಸ್ವಿಯಾಗಿ ಕೊನೆಗೊಳ್ಳಲು ಪತ್ನಿ ಮತ್ತು ತಾಯಿ ಕೂಡ ಬೆಂಬಲ ನೀಡಿದರು. ತನ್ನ ತಂದೆ ತನ್ನ ಪ್ರಯಾಣದ ಬಗ್ಗೆ ಹೇಳಿದಾಗ, ಅವರು ತುಂಬಾ ಸಂತೋಷಪಟ್ಟರು ಮತ್ತು ಅವರನ್ನು ಆಶೀರ್ವದಿಸಿದರು ಎಂದು  ಹೇಳಿದರು.

ಅನಂತ್ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರು ಮಾತನಾಡಿ,  ಪಾದಯಾತ್ರೆ ಪೂರ್ಣಗೊಳಿಸಿದ್ದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಕಳೆದ 10 ದಿನಗಳಿಂದ ಅನಂತ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಎಲ್ಲಾ ಯುವಕರು ನಮ್ಮ ಸಂಸ್ಕೃತಿಯನ್ನು ಹರಡುತ್ತಿದ್ದಾರೆ. ಅನಂತ್‌ಗೆ ಶಕ್ತಿ ನೀಡಲಿ ಎಂದು ದ್ವಾರಕೆಯ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 110 ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದ್ದಕ್ಕೆ ಸಂತೋಷವಾಗಿದೆ ಎಂದು ಅನಂತ್ ಅಂಬಾನಿ ಹೇಳಿದರು.

ಮದುವೆಯ ನಂತರ ಅನಂತ್ ಪಾದಯಾತ್ರೆ ಮಾಡಲು ಯೋಜಿಸಿದ್ದರು ಎಂದು ಅನಂತ್ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚೆಂಟ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net