'ಫ್ಲೈಯಿಂಗ್​ ಎಲೆಕ್ಟ್ರಿಕಲ್​ ಟ್ಯಾಕ್ಸಿ' ಅಭಿವೃದ್ಧಿಪಡಿಸಿದ ಮದ್ರಾಸ್ ಐಐಟಿ ಸಾಧನೆಗೆ ಆನಂದ್ ಮಹೀಂದ್ರಾ ಮೆಚ್ಚುಗೆ!

ananda
Published on

ಚೆನ್ನೈ: ಭಾರತದ ಪ್ರಮುಖ ಮಹಾನಗರಗಲ್ಲಿ ಸ್ಥಳೀಯ ಸಂಚಾರಕ್ಕೆ ಅನುವಾಗುವ ಫ್ಲೈಯಿಂಗ್​ ಎಲೆಕ್ಟ್ರಿಕಲ್​ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಂದಿನ ವರ್ಷದ ವೇಳೆಗೆ ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿಯನ್ನು ನಿರ್ಮಿಸಲು ಮದ್ರಾಸ್‍ನ ಐಐಟಿ ಮುಂದಾಗಿದೆ. ಈ ಬೆಳವಣಿಗೆಯಿಂದ ನಾವು ಇನ್ನು ಮುಂದೆ ಆವಿಷ್ಕಾರಕರ ಕೊರತೆಯಿರುವ ದೇಶವಾಗಿ ಉಳಿಯುವುದಿಲ್ಲ. ಮದ್ರಾಸ್ ಐಐಟಿ ವಿಶ್ವದ ಅತ್ಯಂತ ಸಕ್ರಿಯ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯ ಸಾಧನೆಗೆ ಧನ್ಯವಾದಗಳು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆನಂದ್​ ಮಹೇಂದ್ರ ಅವರು ಮಾಡಿರುವ ಪೋಸ್ಟ್ 190K ಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಪೋಸ್ಟ್ ಹಲವರು ಪ್ರತಿಕ್ರಿಯೆ ನೀಡಿದ್ದು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ 2023-24ರ ಹಣಕಾಸು ವರ್ಷದಲ್ಲಿ ತನ್ನ ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು, ದಾನಿಗಳಿಂದ ಸುಮಾರು 513 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net