ಸೊಸೆಯಿಂದ ಲೈಂಗಿಕ ಕಿರುಕುಳ ಆರೋಪ ದಾಖಲಾದ ಮಾರನೇ ದಿನವೇ ಆತ್ಮಹತ್ಯೆಗೆ ಶರಣಾದ ಮಾಜಿ ಸಚಿವ

Rajendra bahuguna
Published on

ನವದೆಹಲಿ: ಕಿರುಕುಳ ಆರೋಪ ದಾಖಲಾದ ಬೆನ್ನಲ್ಲೇ ಉತ್ತರಾಖಂಡ್​​ನ ಮಾಜಿ ಸಚಿವ ರಾಜೇಂದ್ರ ಬಹುಗುಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರಾಖಂಡದ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದ ರಾಜೇಂದ್ರ ಬಹುಗುಣ ತಮ್ಮ ನಿವಾಸದಲ್ಲಿ ತಲೆಗೆ ಸ್ವತಃ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುಂಡುಹಾರಿಸಿಕೊಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ನಿನ್ನೆಯಷ್ಟೇ ಬಹುಗುಣ ಅವರ ಸೊಸೆ ಹಾಗೂ ಮೊಮ್ಮಗಳ ವಿರುದ್ಧ ಲೈಂಗಿಕ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸಂಬಂಧ ದೂರು ಕೂಡ ದಾಖಲಾಗಿತ್ತು.

ಇದರಿಂದ ಮನನೊಂದಿದ್ದ ರಾಜೇಂದ್ರ ಬಹುಗುಣ ಸ್ವಯಂಪ್ರೇರಿತರಾಗಿ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net