ಬಿಜೆಪಿ ಪಟ್ಟಿಯಲ್ಲಿ ಘೋಷಣೆಯಾಗದ ಕೋಲಾರ ಅಭ್ಯರ್ಥಿ

election
Published on

ಕೋಲಾರ: ಲೋಕಸಭಾ ಚುನಾವಣಾ ಕಣಕ್ಕಿಳಿಯುವ ಹುರಿಯಾಳುಗಳ ಎರಡನೇ ಪಟ್ಟಿಯಲ್ಲಿ ರಾಜ್ಯದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಕೋಲಾರ ಕ್ಷೇತ್ರಗ ಅಭ್ಯರ್ಥಿ ಹೆಸರು ಘೋಷಣೆಯಾಗದೆ ಇರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕೇಂದ್ರ ಬಿಜೆಪಿ ಪ್ರಕಟಿಸಿದೆ. ಈ ಪಟ್ಟಿಯಲ್ಲೆ ಕೋಲಾರ ಕ್ಷೇತ್ರದ ಟಿಕೆಟ್​ ಘೋಷಣೆಯಾಗಬಹುದು ಎಂದು ಕಾರ್ಯಕರ್ತರು ನಿರೀೆಯಲ್ಲಿದ್ದರು. ಮಂಗಳವಾರ ಕೋಲಾರದಿಂದ ತಮಗೆ ಟಿಕೆಟ್​ ಸಿಗುತ್ತದೆ ಎಂದು ಹಾಲಿ ಸಂಸದ ಎಸ್​.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕೋಲಾರ ೇತ್ರವು ಜೆಡಿಎಸ್​ಗೆ ಹಂಚಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು ಟಿಕೆಟ್​ಗಾಗಿ ಅಕಾಂಗಳು ತೀವ್ರ ಕಸರತ್ತು ನಡೆಸುತ್ತಿದ್ದರು, ಸಂಸದ ಎಸ್​.ಮುನಿಸ್ವಾಮಿ ಅವರು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರನ್ನು ಕರೆಯಿಸಿ ಗಣಿ ಕಾರ್ಮಿಕರಿಗೆ ನಿವೇಶನಗಳ ಸ್ವಾಧಿನ ಪತ್ರಗಳನ್ನು ವಿತರಿಸಿದ್ದರು. ಆ ಮೂಲಕ ಟಿಕೆಟ್​ ಕೊಡಿಸುವಂತೆ ಒತ್ತಾಯಮಾಡಿದ್ದರು ಎಂಬುದು ತಿಳಿದುಬಂದಿದೆ.
ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಜೆಡಿಎಸ್​ಗೆ ಹಂಚಿಕೆಯಾಗಿದ್ದು, ಕೋಲಾರ ಕ್ಷೇತ್ರಕ್ಕೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಮುಖಂಡ ಮಲ್ಲೆಶ್​ಬಾಬು ಆಕಾಂಗಳಾಗಿದ್ದಾರೆ. ಈ ಬಗ್ಗೆ ಜೆಡಿಎಸ್​ ವರಿಷ್ಠರು ಎರಡು ಮೂರು ಬಾರಿ ಸರ್ವೇ ಮಾಡಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭೆ ೇತ್ರಗಳಿದ್ದು ಆ ಪೈಕಿ ಶಿಡ್ಲಘಟ್ಟ, ಶ್ರೀನಿವಾಸಪುರ ಹಾಗೂ ಮುಳಬಾಗಿಲು ಕ್ಷೇ ಜೆಡಿಎಸ್​ ಮತ್ತು ಚಿಂತಾಮಣಿ, ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ ಕೆಜಿಎಫ್ ನಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ.

ಜೆಡಿಎಸ್​ ವಾದ ಏನು?:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪರಾಭವಗೊಂಡಿದ್ದ ಅಭ್ಯರ್ಥಿಗಳು ಶೇಕಡವಾರು ಮತ ಪಡೆದುಕೊಂಡಿದ್ದಾರೆ. ಇದರಿಂದ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್​ ಅಭ್ಯರ್ಥಿಗೆ ಟಿಕೆಟ್​ ನೀಡಿದರೆ ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು ಎಂಬುದು ಜೆಡಿಎಸ್​ ಮುಖಂಡರ ವಾದ. ಇದಕ್ಕೆ ಪೂರಕವಾಗಿ ೇತ್ರ ಮುಖಂಡರು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕೋಲಾರ ೇತ್ರದಿಂದ ಜೆಡಿಎಸ್​ ಅಭ್ಯರ್ಥಿಗೆ ಟಿಕೆಟ್​ ನೀಡುವಂತೆ ಒತ್ತಾಯ ಮಾಡಿದ್ದರು. ಬಿಜೆಪಿ ಪಟ್ಟಿ ಪ್ರಕಟಗೊಂಡಿದ್ದು, ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net