

| ಪ್ರಶಾಂತ ರಿಪ್ಪನಪೇಟೆ
ಭಾರತೀಯ ಹಿಂದು ಪಂಚಾಂಗದ ಪ್ರಕಾರ ಪ್ರತಿಮಾಸಕ್ಕೂ ಅದ ರದ್ದೇ ಆದ ಮಹತ್ವ ಇದೆ. ಅಂತೆಯೇ ನವ ಸಂವತ್ಸರದ ನಾಲ್ಕನೇ ಮಾಸವಾಗಿರುವ ಆಷಾಢ ಮಾಸಕ್ಕೂ ತನ್ನದೇ ಆದ ಮಹತ್ವವಿದೆ.
ಆಷಾಢ ಎಂದ ತಕ್ಷಣ ಇದು ಅಶುಭ ಮಾಸ ಎಂಬ ಕಲ್ಪನೆ ಇದೆ. ಆದರೆ ಆಷಾಢ ವಿವಿಧ ಕಾರಣಗಳಿಂದ ಪವಿತ್ರ ಎಂಬುದು ಹಲವರಿಗೆ ತಿಳಿದಿಲ್ಲ. ಹಿಂದು ಪುರಾಣ ಗಳ ಪ್ರಕಾರ ಆಷಾಢದಲ್ಲಿ ಮಹಾವಿಷ್ಣುವು ಯೋಗನಿದ್ರೆ ಯಲ್ಲಿರುತ್ತಾನೆ. ಭಗವಂತ ನಿದ್ರಿಸುತ್ತಿ ರುತ್ತಾನೆಂಬ ಕಾರಣಕ್ಕೆ ಶುಭಕಾರ್ಯಗಳನ್ನು ಮಾಡಲು ನಿಷಿದ್ಧ ಎನ್ನಲಾಗುತ್ತದೆ. ಅಂದರೆ ಆಷಾಢದಲ್ಲಿ ಮದುವೆ, ಗೃಹಪ್ರವೇಶ ಇತ್ಯಾದಿ ಕಾರ್ಯಗಳನ್ನು ಮಾಡುವುದಿಲ್ಲ. ವಿವಾಹದ ಸಂದರ್ಭದಲ್ಲಿ ನವ ವಧುವರರನ್ನು ಪಾರ್ವತಿ-ಪರಮೇಶ್ವರ, ಲಕ್ಷ್ಮೀ- ನಾರಾಯಣ ಸ್ವರೂಪ ಎನ್ನಲಾಗುತ್ತದೆ. ಭಗವಂತ ಈ ವೇಳೆ ಯೋಗ ನಿದ್ರೆಯಲ್ಲಿ ರುವುದರಿಂದ ವಿವಾಹಾದಿ ಶುಭಕಾರ್ಯಗಳು ಶ್ರೇಯಸ್ಕರವಲ್ಲ ಎಂಬ ವಿಶ್ಲೇಷಣೆ ಉಂಟು. ಆದರೆ ಆಷಾಢವು ಪುಣ್ಯಕಾರ್ಯ, ವ್ರತ, ತೀರ್ಥಯಾತ್ರೆ ಮಾಡುವುದಕ್ಕೆ ಬಹಳ ಶ್ರೇಷ್ಠ ಎಂಬ ಮಾತಿದೆ.
ವಿಶೇಷವಾಗಿ ಆಷಾಢ ಶುಕ್ರವಾರ ಲಕ್ಷ್ಮಿ ಪೂಜೆಗೆ ಬಹಳ ಶ್ರೇಷ್ಠ. ಆಷಾಢದಿಂದ ಆರಂಭಿಸಿ ಶ್ರಾವಣದ ಪರ್ಯಂತ ಎಂಟು ಶುಕ್ರವಾರ ಅಷ್ಟಲಕ್ಷ್ಮಿ ಪೂಜೆಯನ್ನು ವ್ರತದಂತೆ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಆಷಾಢದಲ್ಲಿ ಕೆಲ ಸನ್ಯಾಸಿಗಳು ಗುಪ್ತ ನವರಾತ್ರಿ ಆಚರಣೆ ಮಾಡುವ ಮೂಲಕ ಶಕ್ತಿ ಆರಾಧನೆ ಮಾಡುತ್ತಾರೆ.
ವಿಶೇಷ ದಿನಗಳು: ಹಲವು ಮಹತ್ವದ ದಿನಗಳು ಇದೇ ಮಾಸದಲ್ಲಿ ಬರುವುದು ವಿಶೇಷ. ಭಾರತದ ಧಾರ್ವಿುಕ ಸಂಸ್ಕೃತಿಗೆ ಆಧಾರವಾಗಿ ರುವ ವೇದಾಗಮಗಳನ್ನು ವಿಭಾಗಿಸಿಕೊಟ್ಟು, ಶಾಸ್ತ್ರ ಪುರಾಣಗಳನ್ನು ರಚಿಸಿದ ವ್ಯಾಸರ ಸ್ಮರಣೆಯನ್ನು ವ್ಯಾಸ ಪೂರ್ಣಿಮೆ ಹೆಸರಲ್ಲಿ ಆಚರಿಸಲಾಗುತ್ತದೆ. ವ್ಯಾಸ ಎಂಬುದು ಜ್ಞಾನದ ಅನ್ವರ್ಥಕವಾಗಿ ಆಷಾಢ ಪೌರ್ಣಿಮೆಯನ್ನು ಭಾರತದ ಸಮಗ್ರ ಗುರುಪರಂಪರೆ ಯನ್ನು ಸ್ಮರಿಸುವ ಗುರುಪೂರ್ಣಿಮೆ ಹೆಸರಿನಲ್ಲಿ ಆಚರಿಸಲಾಗುತ್ತದೆ.
ಆಷಾಢ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ಪ್ರಸಿದ್ಧ ಧಾರ್ವಿುಕ ಕ್ಷೇತ್ರ ಪಂಡರಪುರದ ಪಾಂಡುರಂಗನ ಯಾತ್ರೆ ಬಹಳ ಪ್ರಸಿದ್ಧವಾಗಿದೆ. ಇದೇ ದಿನ ಸನ್ಯಾಸಿ ಪರಂಪರೆಯಲ್ಲಿ ಚಾತುರ್ವಸ್ಯ ವ್ರತ ಆರಂಭವಾಗುತ್ತದೆೆ. ವೀರಶೈವ ಪರಂಪರೆಯ ಗುರುಪೀಠಗಳು ಧರ್ಮಪ್ರಚಾರಕ್ಕಾಗಿ ಯಾತ್ರೆ ಕೈಗೊಳ್ಳುತ್ತವೆ. ಪಂಚಪೀಠದ ಶ್ರೀ ರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶೈಲ ಜಗದ್ಗುರುಗಳ ಆಷಾಢ ಮಾಸದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಕಾಶೀ ಜಗದ್ಗುರುಗಳ ಆಷಾಢ ಪೂಜಾನುಷ್ಠಾನ ಉತ್ತರ ಭಾರತದ ಪಂಜಾಬ್, ಹರ್ಯಾಣ, ರಾಜಸ್ಥಾನದಲ್ಲಿ ನಡೆಯಲಿದೆ.
ಆಷಾಢ ಮಾಸದ ಶುಕ್ರವಾರವು ಚಾಮುಂಡೇಶ್ವರಿ ದರ್ಶನಕ್ಕೆ ಪವಿತ್ರ ದಿನವಾಗಿದ್ದು, ಮೈಸೂರಿನಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರಸಿದ್ಧ ಪುರಿ ಜಗನ್ನಾಥನ ರಥೋತ್ಸವ ಇದೇ ಮಾಸದಲ್ಲಿ ನಡೆಯುತ್ತದೆ. ಆಷಾಢ ಅಮಾವಾಸ್ಯೆಯನ್ನು ಹಲಹರಿ ಅಮಾವಾಸ್ಯೆ ಎಂದು ಕರೆಯುತ್ತಿದ್ದು, ಪಿತೃಗಳ ಪೂಜೆಗೆ ಶ್ರೇಷ್ಠವಾಗಿದೆ. ಆಷಾಢದ ಸಂಕ್ರಮಣದಂದು ಸೂರ್ಯನು ದಕ್ಷಿಣಾಯಣಕ್ಕೆ ತನ್ನ ಪಥ ಬದಲಿಸುತ್ತಾನೆ.
ಪ್ರಾಕೃತಿಕ, ವೈಜ್ಞಾನಿಕ ಮಹತ್ವ: ಆಷಾಢ ಮಾಸವು ಧಾರ್ವಿುಕ ಮಹತ್ವ ವನ್ನೂ ಹೊಂದಿರುವುದರ ಜೊತೆಗೆ ಪ್ರಾಕೃತಿಕ ಮತ್ತು ಸಾಮಾಜಿಕವಾಗಿ ಪ್ರಮುಖವಾಗಿದೆ. ಈ ಮಾಸದಲ್ಲಿ ಎಲ್ಲೆಡೆ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ ಸಮೃದ್ಧವಾಗಿರುತ್ತವೆ. ಜಗತ್ತಿಗೆ ಅನ್ನ ನೀಡುವ ರೈತ ಬಿತ್ತನೆ ಕಾರ್ಯವನ್ನು ಮಾಡುವ ಪರ್ವಕಾಲವಿದು. ಇನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ತರಗತಿಯ ಅಧ್ಯಯನವನ್ನು ಆರಂಭಿಸುವ ಶುಭಕಾಲ. ಮದುವೆಯಾದ ನವವಧು ಈ ಮಾಸದಲ್ಲಿ ಗಂಡನ ಮನೆಯ ಬದಲಿಗೆ ತವರಿನಲ್ಲಿ ಇರಬೇಕೆಂಬ ನಿಯಮವಿದೆ. ಈ ವೇಳೆ ಗಂಡು-ಹೆಣ್ಣು ಸೇರಿದರೆ ಗರ್ಭಿಣಿಯಾದ ಮಹಿಳೆ ಬಿರು ಬೇಸಿಗೆಯಲ್ಲಿ ಹೆರಿಗೆಯಾಗಿ ಕಷ್ಟಪಡಬೇಕಾಗುತ್ತದೆ ಎಂಬ ವೈಜ್ಞಾನಿಕ ಕಾಳಜಿ ಇದೆ.
ಆಷಾಢ ಏಕಾದಶಿಯಂದು ಯೋಗನಿದ್ರೆಗೆ ಜಾರುವ ಪರಮಾತ್ಮ ನಾಲ್ಕು ದಿನದ ನಂತರ ಬರುವ ಪೂರ್ಣಿಮೆಯಂದು ಸ್ವತಃ ಗುರುವಿನ ರೂಪದಲ್ಲಿ ಅವತರಿಸಿ ಬರುತ್ತಾನೆ. ಸಿದ್ಧಾಂತ ಶಿಖಾ ಮಣಿಯ ಈ ಶ್ಲೋಕ ಇದಕ್ಕೆ ಪೂರಕವಾಗಿದೆ. ಅಪ್ರತ್ಯಕ್ಷೋ ಮಹಾದೇವಃ ಸರ್ವೆಷಾಮಾತ್ಮಮಾ ಯಯಾ| ಪ್ರತ್ಯಕ್ಷೋ ಗುರು ರೂಪೇಣ ವರ್ತತೇ ಭಕ್ತಿಸಿದ್ಧಯೇ|| ಶಸ್ತ್ರ ತ್ಯಜಿಸಿ ಶಾಸ್ತ್ರವನ್ನು ಹಿಡಿದು ಆಗಮಿಸುವ ಶ್ರೀಗುರುವು ಇದೇ ಆಷಾಢದಲ್ಲಿ ಚಾತುರ್ವಸ್ಯ ವ್ರತವನ್ನು ಕೈಗೊಂಡು ಅನುಷ್ಠಾನ, ಪೂಜಾಪಾಠ, ಭಕ್ತರಿಗೆ ಉಪದೇಶ ಮಾಡುತ್ತಾರೆ. | ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶೀ ಜಗದ್ಗುರುಗಳು. ನಮ್ಮ ಪೂರ್ವಿಕರು ಕಾಲವನ್ನು ಕ್ಷಣದಿಂದ ಹಿಡಿದು ಬ್ರಹ್ಮಕಲ್ಪ ದವರೆಗೆ ಅತ್ಯಂತ ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದಾರೆ. ಉತ್ತರಾಯಣದಲ್ಲಿ ಎಲ್ಲ ಮುಹೂರ್ತಗಳನ್ನು ಇಟ್ಟಿದ್ದಾರೆ. ದಕ್ಷಿಣಾಯನದಲ್ಲಿ ಯಾವ ಮುಹೂರ್ತವನ್ನೂ ಇಟ್ಟಿಲ್ಲ. ದೇವತೆಗಳು ಉತ್ತರಾಯಣದಲ್ಲಿ ಎಚ್ಚರದಲ್ಲಿರುತ್ತಾರೆ. ದಕ್ಷಿಣಾಯನದಲ್ಲಿ ನಿದ್ರೆಗೆ ಜಾರು ತ್ತಾರೆ. ನಮ್ಮ ಒಂದು ವರುಷ, ದೇವತೆಗಳಿಗೆ ಒಂದು ದಿವಸಕ್ಕೆ ಸಮ. ಹಾಗಾಗಿ ದೇವತೆಗಳಿಗೆ ಉತ್ತರಾಯಣ ಹಗಲಾದರೆ, ದಕ್ಷಿಣಾಯನ ರಾತ್ರಿ. ಅಂತಹ ದಕ್ಷಿಣಾಯನದ ಆರಂಭವೇ ಈ ಆಷಾಢ. ಆಷಾಢದಲ್ಲಿ ಹೆಚ್ಚು ತಂಪು ಇರುವುದರಿಂದ ಜಠರಾಗ್ನಿ ಕುಂಠಿತ ಗೊಂಡಿರುತ್ತದೆ. ಜೀರಿಗೆ, ಶುಂಠಿ, ಇಂಗು, ನೆಲ್ಲಿಕಾಯಿಯಂತಹ ಪದಾರ್ಥಗಳನ್ನು ಸೇವಿಸುವುದ ರಿಂದ ಜೀರ್ಣಕ್ರಿಯೆಗೆ ಒಳಿತು. | ಹೆದ್ದೆಸೆ ರಮೆಶ ಭಟ್ ಆಧ್ಯಾತ್ಮ ಚಿಂತಕರು.