ಬೆಳ್ ಬೆಳಗ್ಗೆ ಭೂಕಂಪ; ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ...

earthquake
Published on

ಇಸ್ಲಾಮಾಬಾದ್: ರಾತ್ರಿ ಮಲಗಿದ್ದವರು ಸಹಜವಾಗಿ ಎಚ್ಚರಗೊಂಡು ಎದ್ದೇಳುವ ಮೊದಲೇ ಸಾಮೂಹಿಕವಾಗಿ ಬೆಚ್ಚಿಬಿದ್ದು ಎದ್ದೇಳುವಂತಾಗಿದೆ. ಬೆಳ್ಳಂಬೆಳಗ್ಗೆಯೇ ಇಂಥದ್ದೊಂದು ವಿದ್ಯಮಾನವನ್ನು ಸೃಷ್ಟಿಸಿದ್ದು ಭೂಕಂಪ.

ಮುಂಜಾನೆ 4.14 ಗಂಟೆ ಸಮಯದಲ್ಲಿ ಈ ಭೂಕಂಪ ಸಂಭವಿಸಿದ್ದು, ಭೂಕಂಪವನ್ನು ಅಳೆಯುವ ರಿಕ್ಟರ್​ ಮಾಪಕದಲ್ಲಿ ಇದರ ತೀವ್ರತೆ 4.8 ಎಂದು ದಾಖಲಾಗಿದೆ ಎಂಬುದಾಗಿದೆ ನ್ಯಾಷನಲ್​ ಸೆಂಟರ್ ಫಾರ್ ಸೀಸ್ಮಾಲಜಿ ತಿಳಿಸಿದೆ.

ಪಾಕಿಸ್ತಾನದಲ್ಲಿ ಮುಂಜಾನೆ ಈ ಭೂಕಂಪ ಸಂಭವಿಸಿದ್ದು, ಅಲ್ಲಿನ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಸದ್ಯ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net