2ನೇ ಮದ್ವೆಯಾಗಿ 4 ತಿಂಗಳಿಗೆ ಗರ್ಭಿಣಿಯಾದ 'ದಿ ವಿಲನ್' ನಟಿ ಆಮಿ ಜಾಕ್ಸನ್! ದೀಪಾವಳಿಯಂದು ಬೇಬಿ ಬಂಪ್ ಫೋಟೋ ವೈರಲ್...Amy Jackson Pregnant ​​

amyjackson
Published on: 

Amy Jackson Pregnant  : ದಿ ವಿಲನ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸುಂದರಿ ಆಮಿ ಜಾಕ್ಸನ್‌ 2ನೇ ಮದ್ವೆಯಾಗಿ 4 ತಿಂಗಳಿಗೆ ಗರ್ಭಿಣಿಯಾಗಿದ್ದಾರೆ. ಈ ಸಂತೋಷದ ವಿಚಾರವನ್ನು ದೀಪಾವಳಿ ಹಬ್ಬದ ದಿನವೇ ಸೋಶಿಯಲ್​​​  ಮೀಡಿಯಾದಲ್ಲಿ  ನಟಿ ಹಂಚಿ ಕೊಂಡಿದ್ದಾರೆ.

ನಾಯಕಿ ಆಮಿ ಜಾಕ್ಸನ್ ಎರಡನೇ ಬಾರಿಗೆ ತಾಯಿಯಾಗಲಿದ್ದಾರೆ. ಕನ್ನಡ, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಹಾಲಿವುಡ್‌ನ ಖ್ಯಾತ ನಟಿ ಆಮಿ ಜಾಕ್ಸನ್.  ನಟಿ ಬ್ರಿಟನ್ ಗೆ ಹೋಗಿ ನೆಲೆಸಿದ್ದರು.ಆಮಿ ಜಾಕ್ಸನ್ ಈ ಹಿಂದೆ ಉದ್ಯಮಿ ಜಾರ್ಜ್ ಪ್ಯಾನಿಯೊಟೌ ಜೊತೆ ಡೇಟಿಂಗ್ ನಡೆಸಿದ್ದರು. ಅಷ್ಟೇ ಅಲ್ಲ ಮದುವೆಯಾಗದೇ ಮಗುವಿಗೆ ಜನ್ಮ ನೀಡಿದ್ದರು.

ಆಮಿ-ಜಾರ್ಜ್ 2020 ರಲ್ಲಿ ಮದುವೆಯಾಗಬೇಕಿತ್ತು, ಆದರೆ ಕರೋನಾ ಕಾರಣ ಅದನ್ನು ಮುಂದೂಡಲಾಗಿತ್ತು ಎನ್ನಲಾಗಿದೆ.    ಆ ಸಮಯದಲ್ಲಿ, ಆಮಿ ಜಾಕ್ಸನ್ ಮತ್ತು ಜಾರ್ಜ್ ಸಂಬಂಧ ಮುರಿದು ಬಿತ್ತು. ಈ ಮಧ್ಯೆ ನಟಿ ಜಾಕ್ಸನ್ ಜೊತೆ ತನ್ನ ಮಗನೊಂದಿಗೆ ಜೀವನ ಕಳೆಯುತ್ತಿದ್ದಳು.  ಡೇಟಿಂಗ್ ಮಾಡಿ ಅವನೊಂದಿಗೆ ಮಗುವನ್ನು ಹೊಂದಿದ್ದ ಆಮಿ ಜಾಕ್ಸನ್ ಆ ವ್ಯಕ್ತಿಯನ್ನು ಮದುವೆಯಾಗದೆ ಮುರಿದುಬಿತ್ತು.

ಇತ್ತೀಚೆಗೆ, ಆಗಸ್ಟ್‌ನಲ್ಲಿ ಅವರು ಬ್ರಿಟಿಷ್ ನಟ ಎಡ್ ವೆಸ್ಟ್‌ವಿಕ್ ಅವರನ್ನು ವಿವಾಹವಾದರು. ಅವರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ ಮದುವೆಯಾದರು.ಎಡ್ ವೆಸ್ಟ್‌ವಿಕ್ ಮತ್ತು ಆಮಿ ಜಾಕ್ಸನ್ ಆಗಸ್ಟ್‌ನಲ್ಲಿ ವಿವಾಹವಾದರು ಮತ್ತು ಆಮಿ ಜಾಕ್ಸನ್ ಇತ್ತೀಚೆಗೆ ತಾನು ಗರ್ಭಿಣಿ ಎಂದು ಬಹಿರಂಗಪಡಿಸಿದರು.

ದೀಪಾವಳಿಯಂದು ತನ್ನ ಪತಿ ಎಡ್ ವೆಸ್ಟ್‌ವಿಕ್ ಜೊತೆಗಿನ ಬೇಬಿ ಬಂಪ್ ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದರಿಂದಾಗಿ ಈ ಫೋಟೋಗಳು ವೈರಲ್ ಆಗಿದ್ದು, ದಂಪತಿಗೆ ಶುಭ ಹಾರೈಸಲಾಗುತ್ತಿದೆ.