

Amy Jackson welcomes baby boy : ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಿಸಿದ ದಿ ವಿಲನ್ ಸಿನಿಮಾದ ನಟಿ ಆಮಿ ಜಾಕ್ಸನ್ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಈಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಸಂತೋಷದ ವಿಷಯವನ್ನು ಫೋಟೋ ಸಮೇತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಆಮಿ ಜಾಕ್ಸನ್ 2015 ರಿಂದ 2021 ರವರೆಗೆ ಹೋಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ ಅವರೊಂದಿಗೆ ಸಂಬಂಧ ಹೊಂದಿದ್ದರು. ಅವರು 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಅದೇ ವರ್ಷ, ಆಮಿ ಗಂಡು ಮಗುವಿಗೆ ಜನ್ಮ ನೀಡಿದಳು. ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಆದರೆ 2021 ರಲ್ಲಿ, ಆಮಿ ಮತ್ತು ಜಾರ್ಜ್ ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಟ್ಟರು. ನಂತರ ಅವರು ಇಂಗ್ಲಿಷ್ ನಟ ಎಡ್ ವೆಸ್ಟ್ವಿಕ್ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ವಿವಾಹವಾದರು. ನಂತರ ಅಕ್ಟೋಬರ್‌ನಲ್ಲಿ, ಆಮಿ ತಾನು ಮತ್ತೆ ಗರ್ಭಿಣಿ ಎಂದು ಘೋಷಿಸಿದಳು. ಅಂದಿನಿಂದ, ಅವರು ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ತ್ತಿದ್ದರು. ಇಈದಗ ಮಗು ಆಗಿರುವ ಸಂತೋಷದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಎಮಿ ಜಾಕ್ಸನ್ ಈಗ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದು ಎರಡನೇ ಗಂಡು ಮಗುವಿಗೆ ತಾಯಿಯಾಗಿದ್ದೇನೆ ಎಂದು ಘೋಷಿಸಿದ್ದಾರೆ ಮಗುವಿಗೆ ಆಸ್ಕರ್ ಅಲೆಕ್ಸಾಂಡರ್ ವೆಸ್ಟ್ವಿಕ್ ಎಂದು ಹೆಸರಿಟ್ಟಿದ್ದಾಳೆ. ಗಂಡ ಮತ್ತು ಮಗುವಿನೊಂದಿಗೆ ಎಮಿ ಜಾಕ್ಸನ್ ಹಂಚಿಕೊಂಡಿರುವ ಫೋಟೋಗಳು ಸದ್ಯ ವೈರಲ್ ಆಗಿವೆ. ಅಭಿಮಾನಿಗಳು ಎಮಿ ಜಾಕ್ಸನ್‌ಗೆ ಶುಭ ಹಾರೈಸುತ್ತಿದ್ದಾರೆ.