

ಬಂಧಮೋಚನಭಾರಸ್ಯ ಕೃತ್ಸ್ನಸ್ಯೇಶೇ ಸಮರ್ಪಣಂ | ಆತ್ಮಾರ್ಪಣಮಿದಂ ಸಪ್ತಪಂಚಾಶಂ ಸಂಪ್ರಚೋದಿತಮ್ ||
ಬಂಧ-ಮೋಕ್ಷ ಮೊದಲಾದ ತನ್ನ ಎಲ್ಲ ಭಾರವನ್ನು ಸಂಪೂರ್ಣವಾಗಿ ಈಶ್ವರನಿಗೆ ಸಮರ್ಪಿಸುವುದು ಆತ್ಮಾರ್ಪಣ ಎಂದು ಕರೆಯಲ್ಪಡುವ ಐವತ್ತೇಳನೆಯ ಶೀಲ. ಪ್ರತಿಯೊಬ್ಬ ಜೀವಿಯ ಪ್ರತಿ ವ್ಯವಹಾರವನ್ನೂ ಪರಮಾತ್ಮನೇ ಪ್ರಕೃತಿಯ ಮೂಲಕ ಮಾಡಿಸುತ್ತಾನೆ. ಇದನ್ನರಿಯದ ಜೀವಿಗಳು ‘ಇದನ್ನು ನಾನು ಮಾಡಿದೆ, ಇದು ನನ್ನಿಂದಲೇ ಆಗಿದೆ’ ಎಂದು ವ್ಯರ್ಥ ಅಭಿಮಾನಪಟ್ಟು, ಈ ಅಭಿಮಾನದಿಂದಾಗಿಯೇ ದುಃಖಪಡುತ್ತಾನೆ. ‘ನೀನೇ ಎಲ್ಲ! ನಿನ್ನದೇ ಎಲ್ಲ! ನಿನ್ನಂದಲೇ ಎಲ್ಲ! ನೀನಿಲ್ಲದೆ ಏನೂ ಇಲ್ಲ!’ ಎಂಬ ಸರ್ವಸಮರ್ಪಣ ಭಾವದಿಂದ ಎಲ್ಲವನ್ನೂ ಶಿವನ ಮೇಲೆ ಹಾಕಿ ಬದುಕುವಾತ ಸದಾ ಸಂತೃಪ್ತನಾಗಿರುತ್ತಾನೆ.
| ಚಂದ್ರಜ್ಞಾನಾಗಮ (9.115) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು