ವಿಚಾರಣೆ ವೇಳೆ ಉದ್ಧಟತನ ತೋರಿ, ಪೊಲೀಸರನ್ನೇ ಅಪಹಾಸ್ಯ ಮಾಡಿದ ಅಮೂಲ್ಯಾ; ಕೋರ್ಟ್​ನಲ್ಲಿಯೇ ಮಾತನಾಡುತ್ತೇನೆಂಬ ಪ್ರತ್ಯುತ್ತರ

amulya
Published on

ಬೆಂಗಳೂರು: ದೇಶದ್ರೋಹ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾಳ ಪೊಲೀಸ್​ ಕಸ್ಟಡಿ ಇಂದು ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ಎಸ್​ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಯ ಸ್ವ ಇಚ್ಛಾ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ.

ಆದರೆ ವಿಚಾರಣೆ ವೇಳೆ ಅಮೂಲ್ಯಾ ತೀವ್ರ ಉದ್ಧಟತನ ಮೆರೆದಿದ್ದಾಳೆ. ವಿಚಾರಣೆಯುದ್ದಕ್ಕೂ ಹಿಂದುತ್ವ ಮತ್ತು ಆರ್​ಎಸ್​ಎಸ್​, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾಳೆ. ನೀವು ಪಾಕಿಸ್ತಾನ್​ ಜಿಂದಾಬಾದ್​ ಅನ್ನೋದನ್ನ ಮಾತ್ರ ಹೈಲೈಟ್ ಮಾಡಿದ್ದೀರಿ. ನಾನು ಮುಂದೆ ಹೇಳೋದನ್ನೂ ಕೇಳಬೇಕಿತ್ತು ಎಂದು ಪೊಲೀಸರಿಗೇ ತಿರುಗಿ ಮಾತನಾಡಿದ್ದಾಳೆ.

ಮುಂದೆ ಏನು ಹೇಳಬೇಕೆಂದುಕೊಂಡಿದ್ದೆ ಈಗ ಹೇಳು ಎಂದು ಪೊಲೀಸರು ಕೇಳಿದರೆ, ಈಗ್ಯಾಕೆ ನಾನು ಹೇಳಲಿ, ಕೋರ್ಟ್​ನಲ್ಲಿಯೇ ಮಾತನಾಡುತ್ತೇನೆ ಎಂದಿದ್ದಾಳೆ ಎನ್ನಲಾಗಿದೆ.

ತನ್ನ ಸಿದ್ಧಾಂತಗಳ ಬಗ್ಗೆಯೇ ಮಾತನಾಡಿದ ಅಮೂಲ್ಯಾ, ನೋಡಿ ಸರ್​, ನೀವು ನನಗೆ ಇಷ್ಟು ದೊಡ್ಡ ಸೆಕ್ಯೂರಿಟಿ ಕೊಡುತ್ತಿದ್ದೀರಿ. ನೀವೇ ನನ್ನ ಸೆಲೆಬ್ರಿಟಿ ಮಾಡಿದ್ದಿರಿ ಎಂದು ಪೊಲೀಸರನ್ನೇ ಅಪಹಾಸ್ಯ ಮಾಡಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net