ಅಮುಲ್​ ಹಾಲಿನ ದರ ಲೀಟರ್​ಗೆ 2 ರೂಪಾಯಿ ಏರಿಕೆ; ನಾಳೆಯಿಂದಲೇ ಜಾರಿ..

Amul
Published on

ನವದೆಹಲಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಅಮುಲ್, ಹಾಲಿನ ದರವನ್ನು ನಾಳೆಯಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲಿದೆ. ಅಂದರೆ ನಾಳೆಯಿಂದ ಅಮುಲ್ ಹಾಲಿಗೆ ಲೀಟರ್​ಗೆ 2 ರೂಪಾಯಿ ಹೆಚ್ಚು ನೀಡಬೇಕಿದೆ.

ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂಪಾಯಿಯಂತೆ ಹೆಚ್ಚಿಸುವುದಾಗಿ ಅಮುಲ್​ ಸೋಮವಾರ ಪ್ರಕಟಿಸಿದೆ. ದೇಶಾದ್ಯಂತ ಜಾರಿಗೆ ಬರಲಿರುವ ಈ ಪರಿಷ್ಕೃತ ದರ ಎಲ್ಲ ಥರದ ಹಾಲಿಗೂ ಅನ್ವಯಿಸಲಿದೆ.

ಅರ್ಧ ಲೀಟರ್​ ಅಮುಲ್​ ಗೋಲ್ಡ್​ ಹಾಲಿನ ಬೆಲೆ ನಾಳೆಯಿಂದ ರೂ. 30 ಆಗಲಿದೆ. ಅಮುಲ್​ ತಾಜಾ (ಟೋನ್ಡ್​ ಮಿಲ್ಕ್​) ಅರ್ಧ ಲೀಟರ್​ಗೆ 24 ಹಾಗೂ ಅಮುಲ್ ಶಕ್ತಿ ಹಾಲು ಅರ್ಧ ಲೀಟರ್​ಗೆ 27 ರೂಪಾಯಿಯಂತೆ ನಾಳೆಯಿಂದ ಮಾರಾಟವಾಗಲಿವೆ. ಸದ್ಯ ಅಮುಲ್​ ಗೋಲ್ಡ್​ ಲೀಟರ್​ಗೆ 58 ಹಾಗೂ ಅಮುಲ್ ತಾಜಾ ಹಾಲು ಲೀಟರ್​ಗೆ 48 ರೂಪಾಯಿಯಂತೆ ಮಾರಾಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net