ವಿಯೆನ್ನಾ: ನೋಡಿ ಈ ಪ್ರಾಣಿನಾ...ತಮ್ಮ ಮನೆಯ ಸೋಫಾದ ಮೇಲೆ ಹೇಗೆ ಮನುಷ್ಯರಂತೆ ವಿಶ್ರಾಂತಿ ಪಡೆಯುತ್ತಿದೆ. ಬಹುಶಃ ಅದರ ದೊಡ್ಡ ಹೊಟ್ಟೆನೇ ಅದಕ್ಕೆ ಭಾರ ಆಗಿರಬೇಕು..ಹೇಗೆ ಕುಳಿತಿದೆ ನೋಡಿ...
ಒಂತರ ವಿಚಿತ್ರವಾಗಿದೆಯಲ್ಲವಾ ಈ ಪ್ರಾಣಿ. ಯಾವುದಿದು ಅಂತ ಯೋಚನೆ ಮಾಡ್ತಿದ್ದೀರಾ? ಅಷ್ಟೆಲ್ಲ ತಲೆಕೆಡಿಸಿಕೊಳ್ಳೋದು ಬೇಡ...ಇದು ಬೆಕ್ಕು !
ಸ್ಪಿಂಕ್ಸ್ ತಳಿಗೆ ಸೇರಿದ ಬೆಕ್ಕು ಇದು. ಈ ತಳಿಯ ಬೆಕ್ಕುಗಳ ಮೈಮೇಲೆ ಕೂದಲು ಇರೋದಿಲ್ಲ. ಸಾಮಾನ್ಯ ಸಾಕುಬೆಕ್ಕುಗಳಂತೆ ಇವು ಇರೋದಿಲ್ಲ. ತುಸು ವಿಭಿನ್ನ. ಇದಕ್ಕೆ ಕನ್ನಡದಲ್ಲಿ ಸಿಂಹನಾರಿ ಬೆಕ್ಕುಗಳು ಎಂದು ಕರೆಯುತ್ತಾರೆ. ಮೈಯೆಲ್ಲ ನುಣುಪಾಗಿ ಇರುತ್ತದೆ.
ಆಸ್ಟ್ರಿಯಾದ ವಿಯೆನ್ನಾದಲ್ಲಿ ಮಹಿಳೆಯೋರ್ವರು ತಮ್ಮ ಮನೆಯಲ್ಲಿ ಎರಡು ಸ್ಪಿಂಕ್ಸ್ಬೆಕ್ಕುಗಳನ್ನು ಸಾಕಿಕೊಂಡಿದ್ದಾರೆ. ಅದರಲ್ಲಿ ಗಂಡುಬೆಕ್ಕಿಗೆ 6 ವರ್ಷ. ಅದರ ತೂಕ ಬರೋಬ್ಬರಿ 7.5 ಕೆ.ಜಿ. ಅದರ ದೊಡ್ಡ ಹೊಟ್ಟೆಯೇ ಆಕರ್ಷಕ. ಆ ಹೊಟ್ಟೆಯ ಕಾರಣಕ್ಕೆ ಒಡತಿ ಜಾನಾ ಅದಕ್ಕೆ ಆಮ್ಸ್ಟರ್‌ಡ್ಯಾಮ್ ಎಂದು ಹೆಸರಿಟ್ಟಿದ್ದಾರೆ. ಇನ್ನೊಂದು ಬೆಕ್ಕು ಮೂರು ವರ್ಷದ್ದು. ಈ ಹೊಟ್ಟೆ ಡುಮ್ಮಕೆ ಇರುವ ಬೆಕ್ಕಿನ ಪತ್ನಿ ಅದು.

ಅದರಲ್ಲೂ ಆಮ್ಸ್ಟರ್‌ಡ್ಯಾಮ್ ತನ್ನ ದೊಡ್ಡ ಹೊಟ್ಟೆಯನ್ನು ನೆಕ್ಕುತ್ತ, ಸೋಫಾ ಮೇಲೆ, ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುವುದನ್ನು ನೋಡುವುದೇ ಚೆಂದ. ಅಲ್ಲದೆ ಮತ್ತೊಂದು ಹೆಣ್ಣು ಬೆಕ್ಕು ಮಲಗಿದ್ದರೆ ಅದರ ಎದುರು ಹೋಗಿ ಹೊಟ್ಟೆಯನ್ನು ಮುಂದೆ ಮಾಡಿಕೊಂಡು ಕುಳಿತುಕೊಳ್ಳುವ ಭಂಗಿ ನೋಡಿದರೆ ಬಿದ್ದುಬಿದ್ದು ನಗಬೇಕು ಎನ್ನಿಸುತ್ತದೆ. ಥೇಟ್ ಮನುಷ್ಯರಂತೆ ಕುಳಿತುಕೊಳ್ಳುತ್ತಾನೆ ಎಂದು ಜಾನಾ ಮಾರ್ಟಿಂಕಾ ಹೇಳಿಕೊಂಡಿದ್ದಾರೆ.
ಬೆಕ್ಕುಗಳ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಂಡಿರುವ ಮಾಲೀಕರಾದ ಜಾನಾ ಮಾರ್ಟಿಂಕಾ, ನನ್ನ ಬೆಕ್ಕುಗಳು ಕ್ರಿಸ್ಮಸ್ ಮುಗಿಸಿ ನ್ಯೂ ಇಯರ್ನಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿ ಇವೆ ಎಂದು ಹೇಳಿಕೊಂಡಿದ್ದಾರೆ. ನನಗೆ ನನ್ನ ಬೆಕ್ಕುಗಳನ್ನು ಹೀಗೆಲ್ಲ ನೋಡುವುದು, ಅವರ ಫೋಟೋ ತೆಗೆದು, ವಿಡಿಯೋ ಮಾಡುವುದು ತುಂಬ ಇಷ್ಟ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)