ಎಲ್ಲರ ಮುಂದೆ ಕೇಡಿ ಕಿರಣ್​​​ ಮುಖವಾಡವನ್ನು ಕಳಚಿದ ಗೌತಮ್... ಜೈದೇವ್​​​ಗೆ ಶುರುವಾಯ್ತು ನಡುಕ

chaya
Published on

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಗೆ ಆರಂಭದಿಂದಲೂ ಒಳ್ಳೆಯ ರೆಸ್ಪಾನ್ಸ್​​​ ಸಿಕ್ಕಿದೆ. ದಿನದಿಂದ ದಿನಕ್ಕೆ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿ ಸದ್ಯ ಟಿಆರ್‌ಪಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಪ್ರಸ್ತುತ ಈ ಧಾರಾವಾಹಿ ಒಳ್ಳೆಯ ತಿರುವು ಪಡೆದುಕೊಂಡಿದ್ದು, ವೀಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಿದೆ. ಹೌದು, ಗೌತಮ್​​​ (ರಾಜೇಶ ನಟರಂಗ), ಹಾಗೂ ಭೂಮಿಕಾ (ಛಾಯಸಿಂಗ್) ಪಾಲಿಗೆ ಸದ್ಯ ಗೌತಮ್ ಸಹೋದರನಾದ ಜೈದೇವ್​​​ (ರಣವ್​​​) ವಿಲನ್​​​​ ಆಗಿದ್ದಾನೆ.

ಇತ್ತೀಚೆಗೆ ಜೈದೇವ್ ಭೂಮಿಕಾ ಹಾಗೂ ಗೌತಮ್​​​ ಮಧ್ಯೆ ಭಿನ್ನಾಭಿಪ್ರಾಯ ಹುಟ್ಟುಹಾಕಲು ಭೂಮಿಕಾ ಹಳೆಯ ಗೆಳೆಯ ಕಿರಣ್​​​​ನನ್ನು ತನ್ನ ಕಂಪೆನಿಗೆ ಜೈದೇವ್ ಸೇರಿಸಿಕೊಳ್ಳುತ್ತಾನೆ. ಜತೆಗೆ ಭೂಮಿಯ ಮೇಲೆ ಅನುಮಾನ ಬರಲು ಏನು ಮಾಡಬೇಕೋ ಆ ಎಲ್ಲಾ ಸೀನ್​​​ ಕ್ರಿಯೇಟ್​​ ಮಾಡುತ್ತಾನೆ. ಕಿರಣ್​​​ ಕೂಡ ಜೈದೇವ್ ಕೃತ್ಯದಲ್ಲಿ ಭಾಗಿಯಾಗುತ್ತಾನೆ. ತಾನು ಬಹಳ ಸ್ಮಾರ್ಟ್ ಎಂದು ತೋರಿಸಿಕೊಳ್ಳಲು ಶುಕ್ರವಾರದ ಸಂಚಿಕೆಯಲ್ಲಿ ಕಿರಣ್,​​ ತನಗೂ ಹಾಗೂ ಭೂಮಿಕಾಗೂ ಸಂಬಂಧವಿದೆ ಎಂದು ಭೂಮಿಕಾ ಜನ್ಮದಿನದ ಪಾರ್ಟಿಯಲ್ಲಿ ಎಲ್ಲರ ಮುಂದೆ ಹೇಳುತ್ತಾನೆ. ಭೂಮಿಕಾಗೆ ಅದು ಸುಳ್ಳು ಎಂದು ಸಾಬೀತುಪಡಿಸಲು ಸಹ ಅವಕಾಶ ಮಾಡಿಕೊಡುವುದಿಲ್ಲ. ಅಂತಹ ಸಮಯದಲ್ಲಿ ಭೂಮಿಕಾ ತನ್ನ ತಂದೆ ಹಾಗೂ ಕುಟುಂಬದವರನ್ನು ಕರೆದುಕೊಂಡು ಇನ್ನೇನು ಆಚೆ ಹೋಗಬೇಕು ಎನ್ನುವಷ್ಟರಲ್ಲಿ ಗೌತಮ್​​​ ಮುಂದೆ ಬಂದು ನಿಜವೇನೆಂದು ವಿವರಿಸುತ್ತಾನೆ.

ಭೂಮಿಕ ಪರವಾಗಿ ನಿಂತು ಕಿರಣ್​​ಗೆ ಕಪಾಳಮೋಕ್ಷ ಮಾಡುವುದಲ್ಲದೆ, ಕಿರಣ್​​ ಬಂಡವಾಳವನ್ನು ಬಯಲಿಗೆಳೆಯುತ್ತಾನೆ. ಇದರಿಂದ ಭೂಮಿಗೆ ಅಂದರೆ ಭೂಮಿಕಾಗೆ ಮತ್ತೆ ಗೌತಮ್ ಮೇಲಿನ ಒಲವು ಹೆಚ್ಚಾಗಿರುವುದನ್ನು ನಾವು ಸೋಮವಾರದ ಸಂಚಿಕೆಯಲ್ಲಿ ನೋಡಬಹುದು.

ಅಂದಹಾಗೆ ಅಮೃತಧಾರೆ ಧಾರಾವಾಹಿ ʻಬಡೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದ್ದು, ಧಾರಾವಾಹಿಯಲ್ಲಿ ಛಾಯಾ ಸಿಂಗ್, ರಾಜೇಶ್ ನಟರಂಗ, ಚಿತ್ರ ಶೆಣೈ, ರಣವ್, ಶಶಿ ಹೆಗಡೆ, ಸಾರ ಅಣ್ಣಯ್ಯ, ವನಿತ ವಾಸು, ಸಿಹಿ ಕಹಿ ಚಂದ್ರು, ಸ್ವಾತಿ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net