ಅಮೃತಬಿಂದು-ಶ್ರೀ ಶೈವಾಗಮ| ಇಂದ್ರಿಯಗಳ ವಿಷಯದಲ್ಲಿ ಮಾತ್ಸರ್ಯ ಇರಬೇಕೇ ಹೊರತು ಇತರರ ವಿಷಯದಲ್ಲಲ್ಲ!

SHRISHAILA SHREE
Published on

ಮಾತ್ಸರ್ಯಂ ಕರಣೇಷ್ವೇವ ನ ಜನೇಷು ವಹೇತ್ ಕ್ವಚಿತ್ | ಅಮಾತ್ಸರ್ಯಮಿದಂ ಶೀಲಂ ಪಂಚತ್ರಿಂಶಂ ಸಮೀರಿತಮ್ ||
ತನ್ನ ಇಂದ್ರಿಯಗಳ ವಿಷಯದಲ್ಲಿ ಮಾತ್ಸರ್ಯ ಇರಬೇಕೇ ಹೊರತು ಇತರರ ವಿಷಯದಲ್ಲಿರಬಾರದು. ಈ ಭಾವವೇ ಅಮಾತ್ಸರ್ಯವೆಂದು ಕರೆಯಲ್ಪಡುವ ಮೂವತೆôದನೆಯ ಶೀಲ. ಇತರರು ತನಗಿಂತ ಶ್ರೀಮಂತ-ವಿದ್ಯಾವಂತ-ಕೀರ್ತಿವಂತರಾದಾಗ ಸಹಿಸಲಾಗದೆ ಅವರ ಬಗ್ಗೆ ಕೇಡು ಬಯಸುವ ಭಾವಕ್ಕೆ ಮಾತ್ಸರ್ಯ ಎನ್ನುತ್ತಾರೆ. ಸಾಮಾನ್ಯವಾಗಿ ಇತರರಿಗೆ ಕೇಡು ಬಯಸಿದಾಗ ಅವರಿಗೆ ಕೇಡಾಗುವುದಿಲ್ಲ, ಬದಲಿಗೆ ನಮಗೇ ಕೇಡಾಗುತ್ತದೆ. ಕಾರಣ ನಮಗೆ ಸದಾ ಇತರರ ಬಗ್ಗೆ ವಾತ್ಸಲ್ಯವಿರಬೇಕೇ ಹೊರತು ಮಾತ್ಸರ್ಯವಲ್ಲ.
| ಚಂದ್ರಜ್ಞಾನಾಗಮ (9.93) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net